ಮೈಸೂರು

ವೈದ್ಯರ ದಿನಾಚರಣೆ ಪ್ರಯುಕ್ತ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ.ಮಹಾಲಕ್ಷ್ಮಿಗೆ ಸನ್ಮಾನ

ಮೈಸೂರು,ಜು.2:- ವೈದ್ಯಕೀಯ ದಿನಾಚರಣೆ ಅಂಗವಾಗಿ ಚಾಮರಾಜ ಜೋಡಿ ರಸ್ತೆ ಪ್ರಾಥಮಿಕ  ಆರೋಗ್ಯ ಕೇಂದ್ರದ ವೈದ್ಯರಾದ ಡಾ. ಮಹಾಲಕ್ಷ್ಮೀ ಅವರಿಗೆ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ನವೀನ್ ಕುಮಾರ್ ಅವರು  ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನವೀನ್ ಕುಮಾರ್  ಮನುಷ್ಯನಿಗೆ ಒಂದಲ್ಲ ಒಂದು ಕಾರಣಕ್ಕೆ ಅನಾರೋಗ್ಯ ಅಥವಾ ಆರೋಗ್ಯಕ್ಕೆ ಸಂಬಂಧಿಸಿದ ತೊಂದರೆಗಳು ಉಂಟಾಗುವುದು ಸಹಜ. ಅದಕ್ಕೆ ಸರಿಯಾದ ಚಿಕಿತ್ಸೆ ಹಾಗೂ ಆರೈಕೆಯ ಕ್ರಮ ಕೈಗೊಂಡಾಗ ವಾಸಿಯಾಗುವುದು. ಅಂತಹ ಒಂದು ಉತ್ತಮ ಆರೋಗ್ಯ ತಪಾಸಣೆ ಹಾಗೂ ಸಲಹೆಯನ್ನು ವೈದ್ಯರಿಂದ ಪಡೆದುಕೊಳ್ಳಬೇಕು. ಆಗಲೇ ನಮ್ಮ ಆರೋಗ್ಯ ಉತ್ತಮವಾಗಿರಲು ಸಾಧ್ಯ. ನಮ್ಮ ಶರೀರಕ್ಕೆ ಯಾವುದೇ ಅನಾರೋಗ್ಯ ಆವರಿಸಿಕೊಂಡರೂ ಅದನ್ನು ಬಹು ಬೇಗ ಗುಣಮುಖ ಗಳಿಸುವ ಸಾಮರ್ಥ್ಯ ಇರುವುದು ವೈದ್ಯರಲ್ಲಿ ಎಂದು ಹೇಳಿದರು.

ಈ ಸಂದರ್ಭ  ಕಾಂತಿಲಾಲ್ ,ಲಲಿತ್,ಆಸ್ಪತ್ರೆಯ ಸಿಬ್ಬಂದಿಯಾದ ಮಮತಾ, ಸವಿತಾ, ಮಹಾದೇವಿ ಮಂಜುನಾಥ್, ಮುಂತಾದವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: