ಮೈಸೂರು

ಕಪ್ಪು ಹಣ ಬಿಳಿಯಾಗಿಸುವ ದಂದೆ : ಆರು ಮಂದಿ ಬಂಧನ

ಮೈಸೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಕಪ್ಪು ಹಣವನ್ನು ಬಿಳಿ ಮಾಡುವ ದಂದೆಯಲ್ಲಿ ತೊಡಗಿರುವವರನ್ನು ಪತ್ತೆ ಹಚ್ಚಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ನಾಲ್ವರು ಸೇರಿದಂತೆ ಆರು ಮಂದಿಯನ್ನು ಬಂಧಿಸಿ, ಅವರಿಂದ 12ಲಕ್ಷ ಹಳೆಯ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಮೂಲತಃ ಮಡಿಕೇರಿಯವನಾದ ಅಬ್ದುಲ್ ಲತೀಫ್, ದಟ್ಟಗಳ್ಳಿ ನಿವಾಸಿ ದಿನೇಶ್, ತಮಿಳುನಾಡಿನ  ಆದಿಶೇಷ ಸೇರಿದಂತೆ ಆರುಮಂದಿ ಸೇರಿ ನಜರ್ ಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಹೋಟೆಲ್ ಒಂದರಲ್ಲಿ ರೂಮೊಂದನ್ನು ಬಾಡಿಗೆಗೆ ಪಡೆದು   ಹಣವನ್ನು ಬಿಳಿಯನ್ನಾಗಿಸುವ ದಂದೆಯಲ್ಲಿ ತೊಡಗಿದ್ದರು. ಕಳೆದ 15 ದಿನಗಳಿಂದಲೂ ನಗರದ ವಿವಿಧೆಡೆ ವಾಸ್ತವ್ಯ ಹೂಡಿ ಇದೇ ದಂದೆಯಲ್ಲಿ ತೊಡಗಿ  ಶೇ.20ರಿಂದ40ರವರೆಗೆ ಕಮಿಷನ್ ಪಡೆಯುತ್ತಿದ್ದರು. ಪೊಲೀಸರು ದಾಳಿ ನಡೆಸುವಷ್ಟರಲ್ಲಿ 12ಲಕ್ಷ ವ್ಯವಹಾರ ನಡೆಸಿದ್ದರು. ಅವರ ಬಳಿ 12ಲಕ್ಷ ಹಳೆಯ ನೋಟುಗಳು ಸಿಕ್ಕಿ ಬಿದ್ದಿವೆ. ನಜರ್ ಬಾದ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇವರಿಗೆ ಹಳೆಯ ನೋಟುಗಳನ್ನು ಪೂರೈಸುತ್ತಿದ್ದವರು ಯಾರು? ರದ್ದಾಗಿ ತಿಂಗಳುಗಳೇ ಕಳೆದರೂ ಯಾರು ಇಷ್ಟೆಲ್ಲ ಹಣವನ್ನಿರಿಸಿಕೊಂಡಿದ್ದರು ಎನ್ನುವ ಕುರಿತು ತನಿಖೆಯ ಬಳಿಕವೇ ತಿಳಿದುಬರಬೇಕಿದೆ. (ಕೆ.ಎಸ್-ಎಸ್.ಎಚ್)

 

Leave a Reply

comments

Related Articles

error: