ಮೈಸೂರು

ಇಂದೂ ಕೂಡ ಮುಂದುವರಿದ ಎನ್ ಟಿ ಎಂ ಶಾಲೆ ಉಳಿಸಿ ಹೋರಾಟ : ಆಮ್ ಆದ್ಮಿ ಪಕ್ಷ ಬೆಂಬಲ

ಮೈಸೂರು,ಜು.3:-ಎನ್ ಟಿ ಎಂ ಶಾಲೆ ಉಳಿಸಿ ಹೋರಾಟ  ಇಂದೂ ಕೂಡ ಮುಂದುವರಿದಿದ್ದು, ಇಂದು ಆಮ್ ಆದ್ಮಿ ಪಕ್ಷ ಬೆಂಬಲ ವ್ಯಕ್ತಪಡಿಸಿದೆ.

ಪ್ರತಿಭಟನೆಗಿಳಿದ ಆಮ್ ಆದ್ಮಿ ಪಾರ್ಟಿ ಮೈಸೂರು ಜಿಲ್ಲಾ ಸಂಚಾಲಕಿ   ಮಾಲವಿಕ ಗುಬ್ಬಿವಾಣಿ ಮಾತನಾಡಿ  ಶಾಲೆಯನ್ನು ಬೇಕಂತಲೆ ನಿರ್ಲಕ್ಷ್ಯಿಸಿ ಶಾಲೆಯಲ್ಲಿ ಕಡಿಮೆ ಮಕ್ಕಳು ಉಳಿಯುವಂತೆ  ಮಾಡಿ  ಕೊನೆಗೆ ಮುಚ್ಚಲು  ಕಾರಣ ಮಾಡಿ ಈ ಜಾಗ ಯಾರ ಕೈಗೆ ಹೋಗತ್ತೆ ಎನ್ನುವುದು ಗೊತ್ತಿಲ್ಲ ಎಂದರು.

ಶಾಲೆ ಅಭಿವೃದ್ಧಿ ಕಾರ್ಯ ತುಂಬಾನೆ ಇದೆ. ಅದರಲ್ಲೂ ಈ ಕಠಿಣ ಪರಿಸ್ಥಿತಿಯಲ್ಲಿ  ಮಕ್ಕಳು ಶಾಲೆಯ ಶುಲ್ಕ ಭರಿಸಲಾಗದೆ ಖಾಸಗಿ ಶಾಲೆಗಳಿಂದ ಹೊರಬರುತ್ತಿದ್ದಾರೆ. ಖಾಸಗಿ ಶಾಲೆ ಬಿಟ್ಟು ಸರ್ಕಾರಿ ಶಾಲೆ ಸೇರುತ್ತಿದ್ದಾರೆ. ಒಳ್ಳೆಯ ಶಿಕ್ಷಣ ಸಿಗತ್ತೆ ಅಂತ ಅಲ್ಲ, ಖರ್ಚು ಭರಿಸಲಿಕ್ಕಾಗಲ್ಲ ಅನ್ನೋ ಕಾರಣಕ್ಕಾಗಿ ಸೇರುತ್ತಿದ್ದಾರೆ. ಶಾಲೆಗಳನ್ನು ಹೆಚ್ಚು ಮಾಡಬೇಕು, ಶಾಲೆಗಳನ್ನು ಉದ್ಧಾರ ಮಾಡಬೇಕು, ಶಾಲೆಗಳನ್ನು ಬಲಪಡಿಸಬೇಕು ಅನ್ನೋ ಸಮಯದಲ್ಲಿ  ಶಾಲೆಯನ್ನು ಮುಚ್ಚುತ್ತಿದ್ದಾರೆ. ಸ್ಮಾರಕ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ, ಸ್ವಾಮಿ ವಿವೇಕಾನಂದರ ಬಗ್ಗೆ ಆಗಲಿ, ಆಶ್ರಮದ ಬಗ್ಗೆ ಆಗಲಿ ನಮಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ.  ಮಾಡುತ್ತಿರುವ ಕೆಲಸಕ್ಕೆ ಕೆಟ್ಟ ಅಭಿಪ್ರಾಯವೇನಿಲ್ಲ, ಶಾಲೆಯನ್ನೂ ಉಳಿಸಿ ಸ್ಮಾರಕ ಮಾಡಬಹುದು. ಶಾಲೆ ಕೆಡವ ಬೇಕು ಅನ್ನುವ ಪರಿಸ್ಥಿತಿ ಇಲ್ಲ, ಶಾಲೆಯನ್ನು ಅಭಿವೃದ್ಧಿಪಡಿಸಿ ಇನ್ನೂ ಹೆಚ್ಚಿನ ಮಕ್ಕಳು ಬರುವಂತೆ ಮಾಡಬೇಕು. ಮೈಸೂರಿನಲ್ಲಿ ಹಲವಾರು ಜಾಗವಿದ್ದು, ಅದರಲ್ಲಿ ಯಾವುದಾದರೂ ಸರ್ಕಾರ ನೀಡಬಹುದು, ಶಾಲೆ ಕೆಡವಿ ಸ್ಮಾರಕ ನಿರ್ಮಾಣ ಮಾಡಬೇಕು ಎಂಬುದಕ್ಕೆ ನಮ್ಮ ವಿರೋಧವಿದೆ ಎಂದರು.

ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: