
ಮೈಸೂರು
ವಿಕ್ರಂ ಆಸ್ಪತ್ರೆ ಮುಂಭಾಗ ಶಾಸಕ ಎಲ್.ನಾಗೇಂದ್ರ ನೇತೃತ್ವದಲ್ಲಿ ವೃಕ್ಷಾರೋಹಣ ಕಾರ್ಯಕ್ರಮ
ಮೈಸೂರು,ಜು.3:- ಜನಸಂಘದ ಸ್ಥಾಪಕರಾದ ಡಾ.ಶ್ಯಾಮಪ್ರಸಾದ್ ಮುಖರ್ಜಿ ಯವರ ಬಲಿದಾನದ ಹಿನ್ನಲೆಯಲ್ಲಿ ಕೈಗೊಂಡ ವೃಕ್ಷಾರೋಹಣ ಕಾರ್ಯಕ್ರಮದ ಪ್ರಯುಕ್ತ ಚಾಮರಾಜ ಕ್ಷೇತ್ರದ ವಾರ್ಡ ನಂ18 ಯಾದವಗಿರಿ ವಿಕ್ರಂ ಆಸ್ಪತ್ರೆ ಮುಂಭಾಗ ಶಾಸಕ ಎಲ್.ನಾಗೇಂದ್ರ ನೇತೃತ್ವದಲ್ಲಿ ಸಸಿ ನೆಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ರವಿ ಕುಮಾರ್ , ರಾಮಕೃಷ್ಣ ಆಶ್ರಮದ ಸ್ವಾಮೀಜಿ , ನಗರಧ್ಯಕ್ಷರಾದ ಶ್ರೀವತ್ಸ , ಫಣೀಶ್, ಬಿಜೆಪಿ ಮಂಡಲ ಪದಾಧಿಕಾರಿಗಳು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)