ದೇಶಪ್ರಮುಖ ಸುದ್ದಿ

ಲಡಾಖ್‌ ಗೆ ಬರುವ ಎಲ್ಲಾ ಪ್ರವಾಸಿಗರಿಗೆ ಆರ್‌ ಟಿ-ಪಿಸಿಆರ್  ನೆಗೆಟಿವ್ ವರದಿ ಕಡ್ಡಾಯ

ದೇಶ(ನವದೆಹಲಿ)ಜು.3:- ಲಡಾಖ್‌ಗೆ ಭೇಟಿ ನೀಡುವ ಎಲ್ಲ ಪ್ರವಾಸಿಗರಿಗೆ ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿದೆ.

ರೋಡ್  ಮತ್ತು ವಿಮಾನದ ಮೂಲಕ ಬರುವ ಎಲ್ಲ ಪ್ರವಾಸಿಗರು  96 ಗಂಟೆಗಳ ಮೊದಲಿನ ಪರೀಕ್ಷಾ ವರದಿಯನ್ನು ತರಬೇಕಾಗುತ್ತದೆ. ಲಡಾಖ್‌ನಲ್ಲಿ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಈ ವ್ಯವಸ್ಥೆ ಕೈಗೊಳ್ಳಲಾಗಿದೆ.

ಈ ಮೊದಲು  ಕೊರೋನಾ ಪ್ರಕರಣಗಳು ಕಡಿಮೆ ಇದ್ದ ಕಾರಣ ‘ಟೆಸ್ಟ್ ಆನ್ ಅರೈವಲ್’ ಸೌಲಭ್ಯವನ್ನು ಸಹ ಇರಿಸಲಾಗಿತ್ತು, ಆದರೆ ಈಗ ಎಲ್ಲಾ ಪ್ರವಾಸಿಗರಿಗೆ ನೆಗೆಟಿವ್  ವರದಿಗಳನ್ನು ತಂದ ನಂತರವೇ ಲಡಾಖ್ ಪ್ರವೇಶಿಸಲು ಅವಕಾಶವಿರಲಿದೆ. ರೋಡ್ ಮತ್ತು ವಿಮಾನದ ಮೂಲಕ ಬರುವವರಿಗೆ ಈ ನಿಯಮ ಅನ್ವಯವಾಗುತ್ತದೆ.

ಈ ಬಗ್ಗೆ ಎಚ್ಚರಿಕೆ ನೀಡಿರುವ ಲಡಾಖ್ ಪ್ರವಾಸೋದ್ಯಮ ಇಲಾಖೆ ನೆಗೆಟಿವ್ ವರದಿ ತರದ ಪ್ರವಾಸಿಗರನ್ನು  ವಾಪಸ್ ಕಳುಹಿಸಲಾಗುವುದು ಎಂದು ಹೇಳಿದೆಯಲ್ಲದೇ, ಪಾಸಿಟಿವ್  ಕಂಡು ಬರುವ ಪ್ರವಾಸಿಗರು ತಮ್ಮ ಸ್ವಂತ ವೆಚ್ಚದಲ್ಲಿ  ಕ್ವಾರೆಂಟೈನ್ ನಲ್ಲಿರಬೇಕೆಂದು ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ ಲಡಾಖ್‌ ನಲ್ಲಿ 21 ಹೊಸ ಪ್ರಕರಣಗಳು ದಾಖಲಾಗಿವೆ, ಅದರಲ್ಲಿ 30 ಪ್ರತಿಶತ ಜನರು ಹೊರಗಿನಿಂದ ಬರುತ್ತಿದ್ದಾರೆ.  ಶುಕ್ರವಾರ 32 ಮಂದಿ ಗುಣಮುಖರಾಗಿದ್ದಾರೆ. ಗುಡ್ ನ್ಯೂಸ್ ಏನೆಂದರೆ ಕಳೆದ ಕೆಲವು ದಿನಗಳಿಂದ ಮರಣ ಸಂಭವಿಸಿಲ್ಲ. ಇಲ್ಲಿಯವರೆಗೆ ಒಟ್ಟು 20,500 ಕ್ಕೂ ಹೆಚ್ಚು ಕೊರೋನಾ ಸಕಾರಾತ್ಮಕ ಪ್ರಕರಣಗಳು ಬಂದಿವೆ. 241 ಮಂದಿ ಇನ್ನೂ ಸೋಂಕಿಗೆ ಒಳಗಾಗಿದ್ದಾರೆ. 19658 ರೋಗಿಗಳನ್ನು ಗುಣಪಡಿಸಲಾಗಿದೆ. ಅದೇ ಸಮಯದಲ್ಲಿ ಒಟ್ಟು 202 ಜನರು ಪ್ರಾಣ ಕಳೆದುಕೊಂಡಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: