ಕರ್ನಾಟಕಪ್ರಮುಖ ಸುದ್ದಿಮೈಸೂರು

ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಸಲು ಇದು ಸೂಕ್ತ ಸಮಯವಲ್ಲ : ಹೆಚ್.ವಿಶ್ವನಾಥ್ ಹೇಳಿಕೆ

ಮೈಸೂರು,ಜು.4:- ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಸಲು ಇದು ಸೂಕ್ತ ಸಮಯವಲ್ಲ ಜುಲೈ 3ನೇ ವಾರದಲ್ಲಿ ಡೆಲ್ಟ್ ಪ್ಲಸ್ ಅಲೆ ಬರುತ್ತೆ ಅಂತ ಹೇಳುತ್ತಲೇ ಇದ್ದಾರೆ.ಡೆಲ್ಟಾ ಪ್ಲಸ್ ಮಕ್ಕಳ ಮೇಲೆ‌ ಪರಿಣಾಮ ಬೀರುತ್ತೆ ಅಂತ ತಜ್ಞರು ಹೇಳುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ತಿಳಿಸಿದರು.

ಮೈಸೂರಿನಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಎಲ್ಲಾ ಕಡೆ ಒಂದು ರೀತಿಯ ಆತಂಕದ ವಾತಾವರಣವಿದೆ.ಪರೀಕ್ಷೆಗೆ ಮಕ್ಕಳಿಗೂ ಸರಿಯಾದ ಪಾಠ ಪ್ರವಚನಗಳಾಗಿಲ್ಲ. ಮಕ್ಕಳು ಶಾಲೆ‌ ಮುಖ ನೋಡಿ ತಿಂಗಳುಗಟ್ಟಲೆ ಆಗಿದೆ. ಮಕ್ಕಳು ಆನ್ ಲೈನ್ ಪಾಠ ಕೇಳೋಕೆ ಸೂಕ್ತ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ಪರೀಕ್ಷೆಯಿಂದ ಮಕ್ಕಳ ಮೇಲೆ‌ ಅನಾಹುತವಾದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.  ಸುರೇಶ್ ಕುಮಾರ್ ಪರೀಕ್ಷೆ ಹಠದಿಂದ ಹಿಂದೆ‌ ಸರಿಯಬೇಕು ಎಂದು  ಆಗ್ರಹಿಸಿದರು.

ಬಿಜೆಪಿ ಕೆಲ ಶಾಸಕರು ಕಾಂಗ್ರೆಸ್ ಸಂಪರ್ಕದ ಕುರಿತಂತೆ ಪ್ರತಿಕ್ರಿಯಿಸಿ ಡಿ.ಕೆ.ಶಿವಕುಮಾರ್ ಒಬ್ಬ ಸಂಘಟನಾ ಚತುರ. ಡಿಕೆಶಿ ಕರೆದಾಕ್ಷಣ ಯಾರೂ ಕಾಂಗ್ರೆಸ್‌ ಗೆ ಹೋಗಲ್ಲ. ಆದರೆ ಅವರ ಸೌಜನ್ಯ ಇದೆಯಲ್ಲ ಅದು ಮೆಚ್ಚುವಂತಹದ್ದು. ಸಿದ್ದರಾಮಯ್ಯನವರಿಗೆ  ನಾವು ಬಂದುಬಿಡ್ತೀವಿ ಅನ್ನೋ ಆತಂಕನೂ‌ ಬೇಡ ಎಂದು
ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ    ಟಾಂಗ್ ನೀಡಿದರು.
ನಿಮ್ಮನ್ನು ಜೆಡಿಎಸ್‌ನಿಂದ ಕಿತ್ತೆಸೆದಾಗ ಇದೇ ಡಿಕೆ ಶಿವಕುಮಾರ್, ನಾನು ಎಸ್.ಎಂ.ಕೃಷ್ಣ ಎಲ್ಲಾ ಸಿದ್ದರಾಮಯ್ಯನ ಕಾಂಗ್ರೆಸ್ ಗೆ ಸೇರಿಸಿಕೊಂಡ್ವಿ‌. ಆವಾಗ ಯಾರಾದ್ರೂ ಸಿದ್ದರಾಮಯ್ಯ ಬಂದರೆ ಪ್ರಳಯ ಆಗುತ್ತೆ ಅಂದ್ರ. ಸಿದ್ದರಾಮಯ್ಯ ದ್ವೇಷ ಸಾಧನೆ‌ ಮಾಡುವುದಲ್ಲ. ಡಿಕೆಶಿಯವರಂತೆ ಸೌಜನ್ಯ ಸಿದ್ದರಾಮಯ್ಯಗೂ ಬರಬೇಕು ಎಂದು ಹೇಳಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: