ಮೈಸೂರು

ಅಪ್ರಾಪ್ತೆಯನ್ನು ವಿವಾಹವಾದ ಯುವಕನ ಬಂಧನ

ಮೊದಲ ಪತ್ನಿಗೆ ವಿಚ್ಛೇದನ ನೀಡದೆ ಅಪ್ರಾಪ್ತೆಯನ್ನು ವಿವಾಹವಾದ ಭೂಪನನ್ನು ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ಕರಿಮಂಡಿ ನಿವಾಸಿ ಪ್ರಮೋದ್ (24) ಬಂಧಿತ ವ್ಯಕ್ತಿ. ಈತ ಈಗಾಗಲೇ ಮದುವೆಯಾಗಿದ್ದು, ಪತ್ನಿಗೆ ವಿಚ್ಛೇದನ ನೀಡದೆ 17 ವರ್ಷದ ಬಾಲಕಿಯನ್ನು ವಿವಾಹವಾಗಿದ್ದಾನೆ. ಆಕೆ ಮಗುವಿನ ತಾಯಿ ಆಗಿದ್ದಾಳೆ. ಮೊದಲ ಪತ್ನಿ ತನ್ನ ಪತಿ ಎರಡನೇ ಮದುವೆಯಾಗಿರುವ ಬಗ್ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಪೋಸ್ಕೋ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎನ್.ಆರ್. ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ. (ಕೆ.ಎಸ್.ಎಲ್.ಜಿ)

Leave a Reply

comments

Related Articles

error: