ಮೈಸೂರು

ಬನುಮಯ್ಯ ವೃತ್ತದಲ್ಲಿ ಬನುಮಯ್ಯನವರ ಪುತ್ಥಳಿ ನಿರ್ಮಾಣಕ್ಕೆ ಒತ್ತಾಯ

ಮೈಸೂರು,ಜು.5:- ರಾವ್ ಬಹದ್ದೂರ್ ಧರ್ಮಪ್ರಕಾಶ್ ಡಿ ಬನುಮಯ್ಯನವರ 161ನೇ ಜಯಂತ್ಯೋತ್ಸವ ವನ್ನು ಸಯ್ಯಾಜಿರಾವ್ ರಸ್ತೆಯಲ್ಲಿರುವ ಬನುಮಯ್ಯ ಕಾಲೇಜಿನ ಆವರಣದಲ್ಲಿರುವ ಬನುಮಯ್ಯನವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಮೈಸೂರು ಕುಂಚಿಟಿಗರ ಸಂಘದ ಅಧ್ಯಕ್ಷರಾದ ಎಂ.ಪಿ ನಾಗರಾಜ ಅವರ ನೇತೃತ್ವದಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಖಜಾಂಚಿ ಪ್ರದೀಪ್ ಕುಮಾರ್  ರಮಾವಿಲಾಸ ರಸ್ತೆಯಲ್ಲಿರುವ  ಬನುಮಯ್ಯ ವೃತ್ತದಲ್ಲಿ ಬನುಮಯ್ಯನವರ ಪುತ್ಥಳಿಯನ್ನು ಜಿಲ್ಲಾಡಳಿತವು ಈ ಕೂಡಲೇ ನಿರ್ಮಿಸಿ ಅನಾವರಣ ಮಾಡಬೇಕೆಂದು ಆಗ್ರಹಿಸಿದರು. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿಕೊಳ್ಳಲು ನೂರು ವರ್ಷಗಳ ಹಿಂದೆ ವಿದ್ಯಾಸಂಸ್ಥೆಯನ್ನು ಪ್ರಾರಂಭಿಸಿದ ಕೀರ್ತಿ ಬನುಮಯ್ಯ ನವರಿಗೆ ಸಲ್ಲುತ್ತದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಧರ್ಮಪ್ರಕಾಶ ಎಂಬ ಬಿರುದನ್ನು ಪಡೆದವರು. ಇಂತಹ ಮಹಾನ್ ವ್ಯಕ್ತಿಯ ಪುತ್ಥಳಿ ನಿರ್ಮಾಣಕ್ಕೆ ಹಲವಾರು ವರ್ಷಗಳಿಂದ ನಗರಪಾಲಿಕೆಗೆ ಮತ್ತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ಕೂಡ ಈ ಕಾರ್ಯಕ್ಕೆ ಮುಂದಾಗದೆ ಇರುವುದು ನೋವಿನ ಸಂಗತಿ.  ಈ ಬಾರಿಯಾದರೂ ನಮ್ಮ ಮನವಿಗೆ ಸ್ಪಂದಿಸುವ ಮೂಲಕ   ಮಹಾನ್ ವ್ಯಕ್ತಿಗಳ ಪುತ್ಥಳಿ ನಿರ್ಮಾಣಕ್ಕೆ ಮುಂದಾಗಬೇಕೆಂದು ತಿಳಿಸಿದರು ಈ ಸಂದರ್ಭದಲ್ಲಿ ಮೈಸೂರು ಕುಂಚಿಟಿಗರ ಸಂಘದ ಉಪಾಧ್ಯಕ್ಷ ಸಿ ಕೆ ಗಣೇಶ, ಕಾರ್ಯದರ್ಶಿ ಯೋಗಿಶ್, ನಿರ್ದೇಶಕರಾದ ಸತೀಶ್,ರವಿ, ದೀಪಕ್,ವಿಶ್ವನಾಥ್, ಅನಂತಕುಮಾರ್, ಗಿರೀಶ್ ಮತ್ತು ಜನಾಂಗದ ಹಿರಿಯರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: