ಮೈಸೂರು

ಕೋವಿಡ್ ವಾರಿಯರ್ಸ್ ಗಳನ್ನು ಸನ್ಮಾನಿಸಿದ ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು,ಜು.5:- ಕೋವಿಡ್ ನಂತಹ ಕಷ್ಟಕಾಲದಲ್ಲಿ ಜೀವದ ಹಂಗನ್ನು ತೊರೆದು ಸೇವೆ ಸಲ್ಲಿಸಿದ ವೈದರಿಗೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಕುವೆಂಪು ನಗರದ ಪ್ರಮತಿ ಶಾಲೆಯಲ್ಲಿ ಸನ್ಮಾನಿಸಿದರು.

ಶಾಸಕ ಎಸ್.ಎ. ರಾಮದಾಸ್ ಅವರು ಲಾಕ್ ಡೌನ್ ಆದ ಸಂದರ್ಭದಲ್ಲಿ ಕ್ಷೇತ್ರದ ಜನರಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದಾರೆ. ನಗರ ಪಾಲಿಕೆ ಚುನಾವಣೆ, ಲೋಕಸಭೆಯ ಚುನಾವಣೆಯ ಸಂದರ್ಭದಲ್ಲಿ ಮಾತ್ರ ಮನೆಮನೆಗಳಿಗೆ ತೆರಳುತ್ತೇವೆ. ಆದರೆ ಶಾಸಕ ರಾಮದಾಸ್ ಅವರು ಕೋವಿಡ್ ನಂತಹ ಕಷ್ಟದ ಕಾಲದಲ್ಲಿ ಜನರ ಬಳಿಗೆ ತಾವೆ ತೆರಳಿ ಆರೋಗ್ಯದ ಕಡೆ ಗಮನ ಹರಿಸಿದ್ದಾರೆ ಎಂದರು.

ಕೋವಿಡ್ ನಂತಹ ಕಷ್ಟದ ಕಾಲದಲ್ಲಿ ಎಲ್ಲರೂ ಲಸಿಕೆ ಪಡೆದರೆ ಸಾವುನೋವುಗಳನ್ನು ತಡೆಯಬಹುದು. ಮೊದಲನೆ ಅಲೆಗಿಂತ ಎರಡನೆ ಅಲೆಯಲ್ಲೇ ಹೆಚ್ಚು ಸಾವುಗಳಾಗಿರುವುದನ್ನು ನೋಡಿದ್ದೇವೆ ಎಂದು ಹೇಳಿದರು.

ಮುಖ್ಯಮಂತ್ರಿಗಳ ಆಶಯವು ಎಲ್ಲರಿಗೂ ಲಸಿಕೆ ಸಿಗಬೇಕು. ಕೋವಿಡ್ ಮುಕ್ತರಾಗಬೇಕು ಎಂಬುದಾಗಿದೆ. ಅದೇ ಮಾದರಿಯಲ್ಲಿ ಶಾಸಕ ರಾಮದಾಸ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕಾಗಿ ಲಸಿಕೆಗಳನ್ನು ಕ್ಷೇತ್ರದ ಜನರಿಗಾಗಿ ತರಿಸಿಕೊಂಡು ಲಸಿಕೆಯನ್ನು ನೀಡುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲ ಶಾಸಕ ಎಸ್‌.ಎ. ರಾಮದಾಸ್, ಸಂಸದ ಪ್ರತಾಪ್ ಸಿಂಹ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್, ನಗರ ಪಾಲಿಕೆಯ ಆಯುಕ್ತ ಜಿ. ಲಕ್ಷ್ಮಿಕಾಂತ್ ರೆಡ್ಡಿ ಸೇರಿದಂತೆ ಇತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: