ಕರ್ನಾಟಕಪ್ರಮುಖ ಸುದ್ದಿ

ಡಿಸಿಎಂ ಪುತ್ರ ಲಕ್ಷಣ ಸವದಿ ಪುತ್ರನ ಕಾರು ಬೈಕ್ ಗೆ ಡಿಕ್ಕಿ : ಸವಾರ ಸ್ಥಳದಲ್ಲಿಯೇ ಸಾವು

ರಾಜ್ಯ(ಬಾಗಲಕೋಟೆ),ಜು.6:-  ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಪುತ್ರ ಚಿದಾನಂದ ಸವದಿಯವರ ಕಾರು ಬೈಕ್ ಗೆ ಡಿಕ್ಕಿ ಹೊಡೆದ ಘಟನೆ ಬಾಗಲಕೋಟೆಯಲ್ಲಿ ನಡೆದಿದ್ದು, ಗಂಭೀರ ಗಾಯಗೊಂಡ ಬೈಕ್ ಸವಾರ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ಮೃತ ಬೈಕ್ ಸವಾರನನ್ನು   ಬಾಗಲಕೋಟೆ ತಾಲೂಕಿನ ಚಿಕ್ಕಹಂಡರಗಲ್ ನಿವಾಸಿಕೂಡಲೆಪ್ಪ ಬೋಳಿ(58ವ) ಎಂದು ಹೇಳಲಾಗಿದೆ.   ಕಳೆದ ರಾತ್ರಿ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಅಪಘಾತ ಸಂಭವಿಸಿದೆ.

ವಿಜಯಪುರ ಮಾರ್ಗವಾಗಿ ತೆರಳುತ್ತಿದ್ದ ಚಿದಾನಂದ ಅವರ ಕಾರು ಹೊಲದಲ್ಲಿ ಕೆಲಸ ಮುಗಿಸಿ ಮನೆಗೆ ವಾಪಸ್ ಹೋಗುತ್ತಿದ್ದ ಬೈಕ್ ಸವಾರನಿಗೆ ಗುದ್ದಿದೆ.

ಲಕ್ಷ್ಮಣ ಸವದಿಯವರ ಪುತ್ರ ಚಿದಾನಂದ ಪ್ರಯಾಣಿಸುತ್ತಿದ್ದ ಕೆಎ 22 ಎಂಸಿ 5151 ಸಂಖ್ಯೆಯ ಕಾರು ಇದಾಗಿದ್ದು, ಮೇಲ್ನೋಟಕ್ಕೆ ಡಿಸಿಎಂ ಪುತ್ರನ ಅಜಾಗರೂಕತೆಯ ಚಾಲನೆಯೇ ಇದಕ್ಕೆ ಕಾರಣವೆಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಅಪಘಾತಕ್ಕೀಡಾದ ಬೈಕ್ ಸವಾರನನ್ನು ಆಸ್ಪತ್ರೆಗೆ ಸೇರಿಸುವ ಬದಲು ಪರಾರಿಯಾಗಲು ಚಿದಾನಂದ ಯತ್ನಿಸಿದ್ದರು ಎಂದು ಹೇಳಲಾಗುತ್ತಿದ್ದು,  ಅಪಘಾತದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಚಿದಾನಂದ್  ಅಪಘಾತವಾದ ಕಾರಿನಲ್ಲಿ ತಾನು ಇರಲಿಲ್ಲ, ತಾನು ಆ ಕಾರಿನ ಮುಂದಿನ ಕಾರಿನಲ್ಲಿ ಪ್ರಯಾಣಿಸುತ್ತಿದ್ದೆ ಎಂದು ಹೇಳಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: