ಮೈಸೂರು

ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ

ವ್ಯಕ್ತಿಯೋರ್ವನನ್ನು ಕೊಲೆಗೈದ ಆರೋಪಿಗೆ  ಮೈಸೂರಿನ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವವಾಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಆರೋಪಿ ಕೈಸರ್  ಜೀವವಾಧಿ ಶಿಕ್ಷೆಗೆ ಗುರಿಯಾದ ಅಪರಾಧಿಯಾಗಿದ್ದಾನೆ. ಈತ 2012 ರಂದು ಗುಂಡ್ಲುಪೇಟೆ ತಾಲೂಕಿನ ಕೂತನೂರು ಗ್ರಾಮದ ಬಸವಶೆಟ್ಟಿ ಎಂಬುವರನ್ನು ಕೊಲೆ ಮಾಡಿದ್ದ.  ಕೂಲಿ ಕೆಲಸಕ್ಕೆಂದು ಮೈಸೂರಿಗೆ ಬಂದು ಕಟ್ಟಡವೊಂದರಲ್ಲಿ ಮಲಗಿದ್ದ ಬಸವಶೆಟ್ಟಿಯನ್ನು ರಾತ್ರಿ ವೇಳೆ ಕಳ್ಳತನಕ್ಕೆಂದು ಬಂದ ಕೈಸರ್ ಬಸವಶೆಟ್ಟಿ  ಬಳಿ ಹಣ ಕಿತ್ತಿದ್ದ.  ಇದರಿಂದ ಇವರಿಬ್ಬರ ನಡುವೆ ಘರ್ಷಣೆ ನಡೆದು ಬಸವಶೆಟ್ಟಿ ಗೆ ಕಲ್ಲಿನಿಂದ ಹೊಡೆದು ಸಾಯಿಸಿದ್ದ. ಹೀಗಾಗಿ ಈತನ ವಿರುದ್ಧ ಲಷ್ಕರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈತನ ವಿರುದ್ದ ಠಾಣೆಯಲ್ಲಿ ಐದು ಕೊಲೆ ಪ್ರಕರಣಗಳು ದಾಖಲಾಗಿದ್ದವು. ಆರೋಪಿ ವಿರುದ್ಧ  ಸರ್ಕಾರಿ ಅಭಿಯೋಜಕ ಅಜಿತ್ ಕುಮಾರ್ ಡಿ. ಹಮಿಗಿ ವಾದ ಮಂಡಿಸಿದ್ದರು.

 ಇದೀಗ ನ್ಯಾಯಾಧೀಶ ಎನ್ ಕೃಷ್ಣಯ್ಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: