ಮೈಸೂರು

ಲಾಕ್ ಡೌನ್ ಹಿನ್ನಲೆಯಲ್ಲಿ ಆರ್ಥಿಕ ಸಂಕಷ್ಟ : ಕಿರುನಾಟಕ ಕಲಾವಿದ ನೇಣಿಗೆ ಶರಣು

ಮೈಸೂರು,ಜು.6:-  ಲಾಕ್ ಡೌನ್ ಹಿನ್ನಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕಿರುನಾಟಕ ಕಲಾವಿದ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ವಿಜಯನಗರದಲ್ಲಿ ನಡೆದಿದೆ.

ನವೀನ್ ಕುಮಾರ್ ( 32 ) ಎಂಬವರೇ ಮೃತ ದುರ್ದೈವಿ. ಸಾಕಷ್ಟು ನಾಟಕಗಳನ್ನ ಡೈರೆಕ್ಟ್ ಮಾಡಿ ಪ್ರದರ್ಶನ ನೀಡಿದ್ದ ನವೀನ್ ಕುಮಾರ್ ತನ್ನದೇ ಆದ ತಂಡವನ್ನು ರಚಿಸಿಕೊಂಡಿದ್ದರು. ಮೈಸೂರು ಹಾಗೂ ಬೆಂಗಳೂರಿನ ಕಲಾಮಂದಿರದಲ್ಲಿ ಸಾಕಷ್ಟು ಪ್ರದರ್ಶನ ನೀಡಿದ್ದ ನವೀನ್ ಗೆ ಲಾಕ್ ಡೌನ್ ವೇಳೆ ಆರ್ಥಿಕ ಸಂಕಷ್ಟ ಎದುರಾಗಿದೆ. ಈ ಹಿನ್ನಲೆ ಮನನೊಂದ ನವೀನ್ ತಮ್ಮ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ . (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: