ಮೈಸೂರು

ಅನಧಿಕೃತವಾಗಿ ನಿರ್ಮಿಸಲಾಗಿದ್ದ ಕಟ್ಟಡ ನೆಲಸಮ

ಮೈಸೂರು,ಜು.7:- ನಗರದ ಗೋಕುಲಂ ನ ಎರಡನೇ ಬಡಾವಣೆಯ ನಿವೇಶನ ಸಂಖ್ಯೆ 41ರಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಕಟ್ಟಡವನ್ನು ಮುಡಾ ಸಿಬ್ಬಂದಿಗಳು ನಿನ್ನೆ ನೆಲಸಮಗೊಳಿಸಿದ್ದಾರೆ.

ಮುಡಾ ಆಯುಕ್ತರಾದ ಡಾ.ಡಿ.ಬಿ.ನಟೇಶ್ ನಿರ್ದೇಶನದಂತೆ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆ ಸಿಬ್ಬಂದಿ ನೆರವಿನೊಂದಿಗೆ ಕಟ್ಟಡ ನೆಲಸಮಗೊಳಿಸಿ ನಿವೇಶನ ಸ್ಥಳವನ್ನು ಪ್ರಾಧಿಕಾರದ ವಶಕ್ಕೆ ಪಡೆದಿದ್ದಾರೆ.

ಈ ನಿವೇಶನ ಮೌಲ್ಯ 41ಲಕ್ಷರೂ. ನೆಲಸಮದ ಸಂದರ್ಭ ವಲಯಾಧಿಕಾರಿ ರವೀಂದ್ರಕುಮಾರ್, ಸಂಬಂಧಪಟ್ಟ  ಇಂಜಿನಿಯರ್ ಗಳು ಸ್ಥಳದಲ್ಲಿದ್ದರು ಎಂದು ಪ್ರಕಟಣೆ ತಿಳಿಸಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: