ಕರ್ನಾಟಕಪ್ರಮುಖ ಸುದ್ದಿ

ರಾಜ್ಯ ದ ಎರಡರಿಂದ ಮೂರು ಸದಸ್ಯರಿಗೆ ಕೇಂದ್ರ ಸಚಿವ ಸ್ಥಾನ ಗ್ಯಾರಂಟಿ : ಮುರುಗೇಶ್ ನಿರಾಣಿ ವಿಶ್ವಾಸ

ರಾಜ್ಯ(ಬೆಂಗಳೂರು),ಜು.7: – ರಾಜ್ಯದ ಎರಡು, ಮೂರು ಸಂಸದರಿಗೆ ಕೇಂದ್ರ ಸಚಿವ ಸ್ಥಾನ ಸಿಗುವುದು ಗ್ಯಾರಂಟಿ ಎಂದು ಗಣಿ ಸಚಿವ ಮುರುಗೇಶ್ ನಿರಾಣಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿವಾರು ಲೆಕ್ಕಾಚಾರ ಪ್ರಕಾರ ಲಿಂಗಾಯತರಿಗೆ ಒಂದು, ಪರಿಶಿಷ್ಟ ಜಾತಿಗೆ ಒಂದು ಪಕ್ಕಾ ಆಗಿದೆ. ಮತ್ತೊಂದು ಯಾರಿಗೆ ಕೊಡುತ್ತಾರೋ ನೋಡಬೇಕು ಎಂದು ತಿಳಿಸಿದ್ದಾರೆ.

ರಾಜ್ಯ ರೈಲ್ವೆ ಖಾತೆ ರಾಜ್ಯಕ್ಕೆ ನೀಡಲಿದ್ದಾರೆ ಎಂಬ ವಿಶ್ವಾಸವಿದೆ. ರಮೇಶ್ ಜಿಗಜಿಣಗಿ, ನಾರಾಯಣಸ್ವಾಮಿ, ಉಮೇಶ್ ಜಾಧವ್ ಮೂವರ ಪೈಕಿ ಒಬ್ಬರಿಗೆ ಸಚಿವ ಸ್ಥಾನ ಸಿಗಲಿದೆ ಎಂದು ಹೇಳಿದ್ದಾರೆ.

ದೆಹಲಿ ಭೇಟಿ ಕುರಿತು ಮಾತನಾಡಿ, ವೈಯಕ್ತಿಕ ಕಾರಣಗಳಿಗಾಗಿ ದೆಹಲಿಗೆ ಹೋಗಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: