ದೇಶಪ್ರಮುಖ ಸುದ್ದಿ

ಹಿಂದಿ ಚಿತ್ರರಂಗದ ಹಿರಿಯ ನಟ ವಿನೋದ್ ಖನ್ನಾ ಇನ್ನಿಲ್ಲ

ಹಿಂದಿ ಚಿತ್ರರಂಗದ ಹಿರಿಯ ನಟ ವಿನೋದ್ ಖನ್ನಾ(71) ಇಂದು ಬಾರದ ಲೋಕಕ್ಕೆ ತೆರಳಿದ್ದಾರೆ.

ಹಲವು ದಿನಗಳಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಅವರು, ಮುಂಬೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಇಹಲೋಕ ತ್ಯಜಿಸಿದ್ದಾರೆ.

141 ಚಿತ್ರಗಳಲ್ಲಿ ನಟಿಸಿದ್ದ ಖನ್ನಾ ತಮ್ಮ ಅಮೋಘ ನಟನೆಯಿಂದಾಗಿ ಸಿನಿ ರಸಿಕರ ಮನ ಗೆದ್ದಿದ್ದರು. ಇವರ ಅಗಲಿಕೆಗೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಬಾಲಿವುಡ್ ಚಿತ್ರರಂಗ ಕಂಬನಿ ಮಿಡಿದಿದೆ. (ಎಲ್.ಜಿ)

 

Leave a Reply

comments

Related Articles

error: