ಕರ್ನಾಟಕಪ್ರಮುಖ ಸುದ್ದಿ

ಕಾರ್ಮಿಕರಿಗೆ ಸುರಕ್ಷಾ ಕಿಟ್ ವಿತರಣೆ  

ರಾಜ್ಯ( ದಾವಣಗೆರೆ): ಜು.8:- ದೊಡ್ಡಬಾತಿಯ ರಾಘವೇಂದ್ರ ರೈಲ್ವೆ ಇನ್‍ಫ್ರಾ ಪ್ರೈವೈಟ್ ಲಿಮಿಟೆಡ್ ಆವರಣದಲ್ಲಿ 150 ವಲಸೆ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸುರಕ್ಷಾ ಕಿಟ್ ಗಳನ್ನು  ವಿತರಣೆ ಮಾಡಲಾಯಿತು.

ದಾವಣಗೆರೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ಪ್ರವೀಣ ನಾಯಕ ಹಿರಿಯ ವಕೀಲರಾದ ಎಲ್.ಹೆಚ್. ಅರುಣಕುಮಾರ್ ಜಿಲ್ಲಾ ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸಾಬ್, ಕಾರ್ಮಿಕ ನಿರೀಕ್ಷಕ ನಾಗೇಶ್ ಆರ್ ರಾಜಪ್ಪ ಇತರರು ಹಾಜರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: