ಕ್ರೀಡೆದೇಶಪ್ರಮುಖ ಸುದ್ದಿವಿದೇಶ

ವಿಂಬಲ್ಡನ್ 2021:  ಸಮಾಪ್ತಿಗೊಂಡ ರೋಜರ್ ಫೆಡರರ್ ಪ್ರಯಾಣ ;  ಸೆಮಿಫೈನಲ್ ಪ್ರವೇಶಿಸಿದ ನೊವಾಕ್ ಜೊಕೊವಿಕ್  

ದೇಶ(ನವದೆಹಲಿ)ಜು.8:- ವಿಂಬಲ್ಡನ್ 2021  ಏರಿಳಿತವನ್ನು ಕಂಡಿದೆ.    ಎಂಟು ಬಾರಿ ಚಾಂಪಿಯನ್ ಆಗಿದ್ದ ರೋಜರ್ ಫೆಡರರ್ ಅವರನ್ನು ಹ್ಯೂಬರ್ಟ್ ಹರ್ಕಾಜ್  ನೇರ ಸೆಟ್‌ ಗಳಲ್ಲಿ ಸೋಲಿಸುವ ಮೂಲಕ ಮಾಜಿ ನಂಬರ್ ಒನ್ ಆಟಗಾರನ ಪ್ರಯಾಣವನ್ನು ಸಮಾಪ್ತಿಗೊಳಿಸಿದ್ದಾರೆ.

ಆದರೆ ವಿಶ್ವದ ನಂಬರ್ ಒನ್ ನೊವಾಕ್ ಜೊಕೊವಿಕ್ ಸುಲಭವಾಗಿ ಸೆಮಿಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾದರು. ಮುಂದಿನ ತಿಂಗಳು 40 ನೇ ವರ್ಷಕ್ಕೆ ಕಾಲಿಡಲಿರುವ ಫೆಡರರ್ ತಮ್ಮ 21 ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯ ಪ್ರಕ್ರಿಯೆಯಲ್ಲಿದ್ದರು. ಆದರೆ ಇಡೀ ಪಂದ್ಯದ ಸಮಯದಲ್ಲಿ ಅವರು ಹರ್ಕಜ್‌ಗೆ ಸ್ಪರ್ಧೆ ನೀಡುತ್ತಿರಲಿಲ್ಲ. ಪೋಲೆಂಡ್‌ ನ 14 ನೇ ಶ್ರೇಯಾಂಕದ ಹರ್ಕಾಜ್  6-3, 7-6 (4), 6-0 ರಿಂದ  ಸೋಲಿಸಿ ಮೊದಲ ಬಾರಿಗೆ ಗ್ರ್ಯಾಂಡ್ ಸ್ಲ್ಯಾಮ್ ಸ್ಪರ್ಧೆಯ ಸೆಮಿಫೈನಲ್ ಪ್ರವೇಶಿಸಿದರು.

ಜೊಕೊವಿಕ್ 6-3, 6-4, 6-4ರಲ್ಲಿ ಹಂಗರಿಯ ಅನ್‌ ಸೀಡ್ ಮಾರ್ಟನ್ ಫುಕ್ಸೊವಿಕ್ ಅವರನ್ನು ಸೋಲಿಸಿದರು. ವಿಂಬಲ್ಡನ್‌ ನ ಸೆಮಿಫೈನಲ್‌ ಗೆ ತಲುಪುತ್ತಿರುವುದು ಇದು 10 ನೇ ಬಾರಿ ಆಗಿದೆ. ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯಾವಳಿಗಳಲ್ಲಿ ಅವರು 41 ನೇ ಬಾರಿಗೆ ಕೊನೆಯ ನಾಲ್ಕಕ್ಕೆ ಪ್ರವೇಶಿಸಿದರು.

ಸೆಮಿಫೈನಲ್‌ನಲ್ಲಿ ಜೊಕೊವಿಕ್ ಹತ್ತನೇ ಶ್ರೇಯಾಂಕದ ಡೆನಿಸ್ ಶಪೋವೊಲೊವ್ ಅವರನ್ನು ಎದುರಿಸಲಿದ್ದಾರೆ. ಮೂರೂವರೆ ಗಂಟೆಗಳ ಕಾಲ ನಡೆದ ಪಂದ್ಯದಲ್ಲಿ ಕೆನಡಾದ ಆಟಗಾರ 25 ನೇ ಶ್ರೇಯಾಂಕದ ರಷ್ಯಾದ ಕರೆನ್ ಖಚಾನೋವ್ ಅವರನ್ನು 6-4, 3-6, 5-7, 6-1, 6-4 ಸೆಟ್‌ ಗಳಿಂದ ಸೋಲಿಸಿದರು. ಶಪೋವೊಲೊವ್ ಮೊದಲ ಬಾರಿಗೆ ಗ್ರ್ಯಾಂಡ್ ಸ್ಲ್ಯಾಮ್ ಸ್ಪರ್ಧೆಯ ಸೆಮಿಫೈನಲ್ ತಲುಪಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: