ಮೈಸೂರು

ಚರಂಡಿ ವಿಷಯವಾಗಿ ಪೊಲೀಸ್ ಜೀಪುಚಾಲಕನಿಗೆ ಜೀವ ಬೆದರಿಕೆ : ಪೊಲೀಸರ ಮೊರೆ ಹೋದ ಪತ್ನಿ

ಸಾರ್ವಜನಿಕರನ್ನು ರಕ್ಷಿಸುವ ಪೊಲೀಸರಿಗೇ ರಕ್ಷಣೆ ಇಲ್ಲದಂತಾಗಿದೆ. ಚರಂಡಿ ವಿಷಯವಾಗಿ ತನ್ನ ಪತಿ ಹಾಗೂ ತನ್ನ ಮೇಲೆ  ಪಕ್ಕದ ಮನೆಯ ಜಾನ್ಸನ್ ಮತ್ತವರ ಮಕ್ಕಳು ಅವಾಚ್ಯಶಬ್ದಗಳಿಂದ ನಿಂದಿಸಿ ತನ್ನ ಪತಿಯ ಕಾಲರ್ ಪಟ್ಟಿ ಹಿಡಿದು ಎಳೆದಾಡಿದ್ದಾರೆ ಎಂದು ಪೊಲೀಸ್ ಜೀಪು ಚಾಲನೆ ಮಾಡುವವರ ಪತ್ನಿಯೋರ್ವರು ಮೈಸೂರಿನ ವಿಜಯನಗರ ಠಾಣೆಯಲ್ಲಿ ದೂರು ದಾಖಲಿದ್ದಾರೆ.

ಪೊಲೀಸ್ ಜೀಪು ಚಾಲಕ ಹೂಟಗಳ್ಳಿ ಗ್ರೂಪ್ 3, ಕೆಎಚ್ ಬಿ ಕಾಲನಿಯ ನಿವಾಸಿ ಧನಂಜಯ್ ಅವರ ಪತ್ನಿ ರಾಜೇಶ್ವರಿ ದೂರು ಸಲ್ಲಿಸಿದ್ದಾರೆ. ಪಕ್ಕದವರೇ ಆದ ಜಾನ್ಸನ್ ಮತ್ತವರ ಮಕ್ಕಳು ಸಂಬಂಧಿ ವಕೀಲ ಮತ್ತು ಮಹೇಶ್ ಎಂಬವರು ನನ್ನ ಪತಿಯನ್ನು ಸುತ್ತುವರಿದು ಬೆದರಿಸಿ, ಅವರ ತಲೆ ಹಾಗೂ ಕತ್ತಿನ ಪಟ್ಟಿಯನ್ನು ಹಿಡಿದೆಳೆದಿದ್ದಾರೆ. ನಾನು ಸ್ಥಳಕ್ಕೆ ಹೋದಾಗ ನನ್ನ ಜಡೆಯನ್ನೂ ಹಿಡಿದೆಳೆದಿದ್ದಾರೆ. ಮಹೇಶ್ ಎಂಬ ವ್ಯಕ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಷ್ಟೇ ಅಲ್ಲದೇ ನನ್ನ ಗಂಡನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರ ಸಹಾಯದಿಂದ ಠಾಣೆಗೆ ಬಂದು ದೂರು ನೀಡಿರುತ್ತೇನೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ನಮಗೆ ನ್ಯಾಯ ದೊರಕಿಸಿಕೊಡಿ. ಠಾಣೆಗೆ ಅವರನ್ನು ಕರೆಯಿಸಿ ಬುದ್ಧಿ ಹೇಳಿ ಎಂದು ವಿಜಯನಗರಠಾಣಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: