ಕರ್ನಾಟಕಪ್ರಮುಖ ಸುದ್ದಿ

ಕಾಲಭೈರವನ ಮುಂದೆ ಕುಮಾರಸ್ವಾಮಿ ಕರ್ಪೂರ ಹಚ್ಚಿ ಆಣೆ ಮಾಡಲಿ: ಚಲುವರಾಯಸ್ವಾಮಿ

ಪಾಂಡವಪುರ : ಎಚ್‍.ಡಿ.ಕುಮಾರಸ್ವಾಮಿಯವರು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಅವರು ಹೇಳುತ್ತಿರುವ ವಿಚಾರಗಳು ನಿಜವೇ ಆಗಿದ್ದಲ್ಲಿ ಆದಿಚುಂಚನಗಿರಿಯ ಕಾಲಭೈರವನ ಮುಂದೆ ಕರ್ಪೂರ ಹಚ್ಚಿ ಆಣೆ ಮಾಡಲಿ ಎಂದು ಜೆಡಿಎಸ್ ಬಂಡಾಯ ಶಾಸಕ ಎನ್. ಚಲುವರಾಯಸ್ವಾಮಿ ಸವಾಲು ಹಾಕಿದ್ದಾರೆ.

ಕೆರೆತೊಣ್ಣೂರು ಗ್ರಾಮದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, 20 ತಿಂಗಳ ಜೆಡಿಎಸ್-ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿ ಅವರನ್ನು ಕೆಳಗಿಳಿಸುವ ಯೋಚನೆ ಸಹ ನಾವು ಮಾಡಿಲ್ಲ. ಕುಮಾರಸ್ವಾಮಿ ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನಾವು ಕುಮಾರಸ್ವಾಮಿ ಮಾಡಿರುವ ಆರೋಪ ಕುರಿತು ಆಣೆ ಮಾಡಲು ಸಿದ್ಧರಾಗಿದ್ದೇವೆ. ಕುಮಾರಸ್ವಾಮಿ ಬರದಿದ್ದರೂ, ಕಾಲಭೈರವೇಶ್ವರನ ಮುಂದೆ ನಾನು ಆಣೆ ಮಾತ್ತೇನೆ. ಸುಳ್ಳು ಹೇಳಿದವರನ್ನು ಆ ಕಾಲಭೈರವನೆ ಶಿಕ್ಷಿಸಲಿ ಎಂದು ಹೇಳಿದರು.

ಪಕ್ಷ ಬಿಡುವ ತೀರ್ಮಾನ ಮಾಡಿದ್ದ ನನ್ನನ್ನು ಹಾಗೂ ಜಮೀರ್ ಅಹ್ಮದ್‍ಖಾನ್ ಅವರನ್ನು ಕಾಡಿಬೇಡಿ ಪಕ್ಷದಲ್ಲಿ ಉಳಿಸಿಕೊಂಡ ಕುಮಾರಸ್ವಾಮಿ ಅವರು ಗೌರವಯುತವಾಗಿ ನಡೆದುಕೊಳ್ಳುವುದನ್ನು ಕಲಿತುಕೊಳ್ಳಲಿ ಎಂದು ತಿಳಿಸಿದರು. ದೇವೇಗೌಡರು ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿದರೆ ನಾವೆಲ್ಲರೂ ಬೆಂಬಲಿಸುತ್ತೇವೆ. ಜತೆಗೆ ಅವರಿಗೆ ನಮ್ಮ ಮತವನ್ನೂ ಸಹ ಹಾಕುತ್ತೇವೆ ಎಂದು ಹೇಳಿದರು.

(ಎನ್.ಬಿ.ಎನ್)

Leave a Reply

comments

Related Articles

error: