ದೇಶಪ್ರಮುಖ ಸುದ್ದಿ

ಮುಂದಿನ ವಾರದಿಂದ ಭಾರತೀಯರು ಈ ದೇಶಗಳಿಗೆ ಪ್ರಯಾಣಿಸಬಹುದು !

ದೇಶ(ನವದೆಹಲಿ)ಜು.9:- ಭಾರತದಲ್ಲಿ ದೈನಂದಿನ ಕೊರೋನಾ ವೈರಸ್ ಪ್ರಕರಣಗಳು ಇಳಿಮುಖವಾಗುತ್ತಿವೆ.  ಅಂತಹ ಪರಿಸ್ಥಿತಿಯಲ್ಲಿ ಅನೇಕ ದೇಶಗಳು ಭಾರತೀಯರಿಗಾಗಿ ತಮ್ಮ ಗಡಿಗಳನ್ನು ತೆರೆದಿವೆ. ಮುಂದಿನ ವಾರದಿಂದ ಭಾರತೀಯ ಪ್ರವಾಸಿಗರು  ಪ್ರಯಾಣಕ್ಕೆ ಹೋಗಲು ಸಾಧ್ಯವಾಗಲಿದ್ದು, ಅಂತಹ ದೇಶಗಳ ಪಟ್ಟಿಯಲ್ಲಿ ಕೆನಡಾ, ಮಾಲ್ಡೀವ್ಸ್, ಜರ್ಮನಿಗಳನ್ನು ಸೇರಿಸಲಾಗಿದೆ. ಕೊರೋನಾದ ಎರಡನೇ ಅಲೆಯ ಸಮಯದಲ್ಲಿ  ಅನೇಕ ದೇಶಗಳು ಭಾರತದೊಂದಿಗಿನ ಗಡಿಯನ್ನು ಮುಚ್ಚಿದ್ದವು.

ಕೆನಡಾದ ಸಾರ್ವಜನಿಕ ಆರೋಗ್ಯ ಸಂಸ್ಥೆ ಜುಲೈ 3 ರಂದು ದೇಶದ ನಾಗರಿಕರು ಮತ್ತು ಖಾಯಂ ನಿವಾಸಿಗಳಿಗೆ ಮಾತ್ರ ಪ್ರಯಾಣ ನಿರ್ಬಂಧವನ್ನು ಸಡಿಲಿಸುವುದಾಗಿ ಘೋಷಿಸಿತ್ತು. ಅಂತರರಾಷ್ಟ್ರೀಯ ವಿದ್ಯಾರ್ಥಿಗಳು, ಖಾಯಂ ನಿವಾಸಿಗಳ ಸಂಬಂಧಿಕರು ಮತ್ತು ತಾತ್ಕಾಲಿಕ ಕೆಲಸಗಾರರಿಗೆ  ಕೆಲಸದ ಪರವಾನಗಿಯನ್ನು ಒದಗಿಸುವ ಉದ್ದೇಶವನ್ನು ಈ ಕ್ರಮ ಹೊಂದಿದೆ. ಅದೇ ವೇಳೆ ಭಾರತೀಯರು ಸೇರಿದಂತೆ ಎಲ್ಲಾ ಪ್ರಯಾಣಿಕರು ಕೆನಡಾಕ್ಕೆ ಪ್ರವೇಶಿಸಿದ 72 ಗಂಟೆಗಳ (3 ದಿನಗಳು) ಒಳಗೆ ನಕಾರಾತ್ಮಕ ಕೋವಿಡ್ -19 ಪರೀಕ್ಷಾ ವರದಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ.

ದೇಶಕ್ಕೆ ಪ್ರವೇಶಿಸುವವರು ಕೋವಿಡ್ -19 ಲಸಿಕೆಯ ಎರಡೂ ಡೋಸ್ ತೆಗೆದುಕೊಳ್ಳಬೇಕಾಗುತ್ತದೆ. ಪ್ರಸ್ತುತ, ಕೆನಡಾದ ಸರ್ಕಾರವು ಮಾಡರ್ನಾ, ಫಿಜರ್-ಬಯೋಟೆಕ್, ಅಸ್ಟ್ರಾಜೆನೆಕಾ / ಕೋವಿಶೀಲ್ಡ್ ಮತ್ತು ಜಾನ್ಸನ್ & ಜಾನ್ಸನ್‌   ಲಸಿಕೆಗಳನ್ನು ಅನುಮೋದಿಸಿದೆ. ಭಾರತದ ಸ್ಥಳೀಯ ಲಸಿಕೆ ಕೋವಾಕ್ಸಿನ್ ಮತ್ತು ರಷ್ಯಾ ನಿರ್ಮಿತ ಸ್ಪುಟ್ನಿಕ್ ವಿ ಲಸಿಕೆಯನ್ನು ಇನ್ನೂ ಕೆನಡಾ ಅನುಮೋದಿಸಿಲ್ಲ.

ಭಾರತ ಸೇರಿದಂತೆ ಐದು ಡೆಲ್ಟಾ ರೂಪಾಂತರ ಪೀಡಿತ ದೇಶಗಳ ಮೇಲಿನ ನಿಷೇಧವನ್ನು ಜರ್ಮನ್ ದೇಶ ತೆಗೆದುಹಾಕಿದೆ ಎಂದು ಭಾರತದ ಜರ್ಮನ್ ರಾಯಭಾರಿ ವಾಲ್ಟರ್ ಜೆ ಲಿಂಡ್ನರ್ ಮಂಗಳವಾರ ಪ್ರಕಟಿಸಿದ್ದಾರೆ. ಈಗ COVID-19 ಲಸಿಕೆಯ ಎರಡೂ ಪ್ರಮಾಣವನ್ನು ನೀಡಲಾಗಿರುವ ಅಥವಾ ವೈರಸ್‌ನಿಂದ ಚೇತರಿಸಿಕೊಂಡ ಪುರಾವೆಗಳನ್ನು ತೋರಿಸಬಲ್ಲ ಭಾರತೀಯ ಪ್ರಯಾಣಿಕರು ಇನ್ನು ಮುಂದೆ ತಮ್ಮ ಆಗಮನ, ನಿರ್ಗಮನದ ನಂತರ ಕ್ವಾರೆಂಟೈನ್ ಗೆ ಒಳಪಡಿಸಿಕೊಳ್ಳಬೇಕಿಲ್ಲ  ಎಂದಿದೆ.

ಜುಲೈ 15 ರಿಂದ ಮಾಲ್ಡೀವ್ಸ್‌ ಗೆ  ವಿಮಾನ ಸೇವೆ ಪುನರಾರಂಭಗೊಳ್ಳಲಿದೆ. ಪ್ರಯಾಣಿಕರು ಕಡ್ಡಾಯವಾಗಿ ಆರ್‌ಟಿ-ಪಿಸಿಆರ್ ಪರೀಕ್ಷಾ ವರದಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗಲಿದೆ. ಕೊರೋನಾ ವರದಿಯನ್ನು ತೋರಿಸುವ ಕುರಿತು ಮಾಲ್ಡೀವ್ಸ್‌ನಲ್ಲಿ ನಿಮ್ಮನ್ನು ನೀವು ನಿರ್ಬಂಧಿಸುವ ಅಗತ್ಯವಿಲ್ಲ ಎಂದು ತಿಳಿಸಿದೆ ಎನ್ನಲಾಗಿದ್ದು, ಮಾಧ್ಯಮವೊಂದು ಈ ಕುರಿತು ವರದಿ ಮಾಡಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: