ಪ್ರಮುಖ ಸುದ್ದಿವಿದೇಶ

ಸ್ವೀಡನ್​ನಲ್ಲಿ ವಿಮಾನ ಅಪಘಾತ: 9 ಮಂದಿ ಸಜೀವ ದಹನ

ಸ್ಟಾಕ್‌ಹೋಮ್,ಜು.9-ಮೊನ್ನೆಯಷ್ಟೇ ರಷ್ಯಾದಲ್ಲಿ ವಿಮಾನ ಪತನಗೊಂಡು 28 ಮಂದಿ ದುರ್ಮರಣಕ್ಕೀಡಾಗಿದ್ದರು. ಇದೀಗ ಸ್ವೀಡನ್​ನ ಸ್ವೀಡನ್‌ನ ಒರೆಬ್ರೊ ವಿಮಾನ ನಿಲ್ದಾಣದ ಬಳಿ ವಿಮಾನ ಅಪಘಾತವಾಗಿದ್ದು, 9 ಮಂದಿ ಮೃತಪಟ್ಟಿದ್ದಾರೆ.

ಡಿಎಚ್‌ಸಿ-2 ಟರ್ಬೊ ಬೀವರ್ ಎಂಬ ವಿಮಾನದಲ್ಲಿ ಎಂಟು ಸ್ಕೈ ಡೈವರ್‌ಗಳು ಮತ್ತು ಒಬ್ಬ ಪೈಲಟ್‌ ಗುರುವಾರ ಪ್ರಯಾಣಿಸುತ್ತಿದ್ದರು. ಟೇಕ್‌ ಅಪ್​ ಆದ ಕೆಲವೇ ಕ್ಷಣದಲ್ಲಿ ವಿಮಾನ ನೆಲಕ್ಕಪ್ಪಳಿಸುತ್ತಿದ್ದಂತೆ ಬೆಂಕಿ ಹೊತ್ತಿ ಉರಿದಿದೆ. ವಿಮಾನದಲ್ಲಿದ್ದ 9 ಮಂದಿಯೂ ಸಜೀವ ದಹನಗೊಂಡಿದ್ದಾರೆ.

2019ರಲ್ಲಿ ಉತ್ತರ ಸ್ವೀಡನ್‌ನಲ್ಲಿ 9 ಸ್ಕೈಡೈವರ್‌ಗಳು ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೀಡಾಗಿ ಅವರೆಲ್ರೂ ದುರಂತ ಅಂತ್ಯ ಕಂಡಿದ್ದರು. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: