ಮೈಸೂರು

ಮುಂದುವರಿದ ಎನ್ ಟಿಎಂ ಶಾಲೆ ಉಳಿಸಿ ಹೋರಾಟ ; ಕನ್ನಡ ಶಾಲೆ ಉಳಿಯಲೇಬೇಕು; ಡಾ.ಕೃಷ್ಣೇಗೌಡ

ಮೈಸೂರು,ಜು.9:- ಇಲ್ಲಿನ ಎನ್ ಟಿಎಂ ಉಳಿವಿಗೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆಯ 12ನೇ ದಿನವಾದ ಇಂದೂ ಕೂಡ ಪ್ರತಿಭಟನೆ ಮುಂದುವರಿದಿದೆ.

ವಿವಿಧ ಸಂಘಟನೆಗಳ ಮುಖ್ಯಸ್ಥರು ಅಧಿಕ ಸಂಖ್ಯೆಯಲ್ಲಿ ಶಾಲೆಯ ಮುಂಭಾಗ ಕುಳಿತು ಇಂದೂ ಕೂಡ ಪ್ರತಿಭಟನೆ ನಡೆಸುತ್ತಿದ್ದಾರೆ.  ಪ್ರತಿಭಟನಾನಿರತ ಡಾ.ಹಾ.ತಿ.ಕೃಷ್ಣೇಗೌಡ  ಮಾತನಾಡಿ ಕನ್ನಡಿಗರಿಗೆ ಚಾರಿತ್ರಿಕ ಪ್ರಜ್ಞೆ ಇಲ್ಲ. ವಾಲ್ಟರ್ ಎಲಿಯಟ್ ಎಂಬ ಆಂಗ್ಲ ಅಧಿಕಾರಿ ಧಾರವಾಡದಲ್ಲಿ 1831ರಲ್ಲಿ ಕನ್ನಡ ಶಾಲೆಯನ್ನು ಸ್ವಂತ ಹಣದಿಂದ ಆರಂಭಿಸಿ ಮೂರು ವರ್ಷಗಳ ಕಾಲ ನಡೆಸಿದ. ಆತ ಆಂಗ್ಲ ವ್ಯಕ್ತಿ. ನಾವು ಕನ್ನಡಿಗರು. ಎನ್ ಟಿಎಂ ಶಾಲೆ ಚಾರಿತ್ರಿಕವಾಗಿ ಪ್ರಸಿದ್ಧವಾದದ್ದು. ಹೆಣ್ಣು ಮಕ್ಕಳಿಗಾಗಿ 18ನೆಯ ಶತಮಾನದಲ್ಲಿ ಆರಂಭವಾದ,  ಮಹಾರಾಜರು ಆರಂಭಿಸಿದ ಶಾಲೆಯಿದು. ಕನ್ನಡ ಶಾಲೆಯನ್ನು ಮುಚ್ಚಿ ಅದರ ಸಮಾಧಿಯ ಮೇಲೆ ವಿವೇಕಾನಂದರ ಸ್ಮಾರಕ ನಿರ್ಮಾಣ ಮಾಡಬೇಕಾಗಿಲ್ಲ. ನಮಗೆ ವಿವೇಕಾನಂದರ ಬಗ್ಗೆ, ರಾಮಕೃಷ್ಣಾಶ್ರಮದ ಬಗ್ಗೆ ಅಪಾರ ಗೌರವವಿದೆ. ಆದರೆ ಕನ್ನಡ ಮೊದಲು. ಆನಂತರ ಉಳಿದಿದ್ದು. ಕನ್ನಡ ಶಾಲೆ ಉಳಿಯಲೇಬೇಕು. ಕನ್ನಡ ಉಳಿದರೆ ನಾವು ನಮ್ಮ ಸಂಸ್ಕೃತಿ ಉಳಿಯುತ್ತದೆ. ಯಾವುದೇ ಕಾರಣಕ್ಕೂ ಈ ಶಾಲೆ ಮುಚ್ಚಬಾರದು. ಎಲ್ಲ ಕನ್ನಡಿಗರೂ  ಈ ಹೋರಾಟಕ್ಕೆ ಕೈಜೋಡಿಸಬೇಕು. ಕನ್ನಡ ಮೊದಲು ಉಳಿದದದ್ದು ಆನಂತರ ಎಂದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: