ಮೈಸೂರು

21ದಿನಗಳ ಹೆಚ್ಚುವರಿ ಕಾಲಾವಕಾಶ ವಿಸ್ತರಣೆ

ಮೈಸೂರು,ಜು.10:- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಇ-ಹರಾಜು ಪ್ರಕಟಣೆ ಸಂಖ್ಯೆ 04/2020-21   29/10/2020 ಹಾಗೂ ಪ್ರಕಟಣೆ ಸಂಖ್ಯೆ 05/2020-21  02/03/2021ರಲ್ಲಿ ನಿವೇಶನಗಳನ್ನು ಇ-ಹರಾಜುಗಳ ಮೂಲಕ ವಿಲೇ ಮಾಡಿದ್ದು, ಬಿಡ್ಡುದಾರರಿಗೆ ಹರಾಜು ಸ್ಥಿರೀಕರಣ ಪತ್ರವನ್ನು ಕಳುಹಿಸಲಾಗಿರುತ್ತದೆ. ಬಿಡ್ಡುದಾರರಿಗೆ ಶೇಖಡಾ 75ಭಾಗ ಹಣವನ್ನು ಬಡ್ಡಿ ರಹಿತವಾಗಿ ಪಾವತಿಸಲು 45ದಿನಗಳ ಕಾಲಾವಕಾಶವಿರುತ್ತದೆ. ನಂತರ 90ದಿನಗಳು ಮತ್ತು 30ದಿನಗಳು ಬಡ್ಡಿಯೊಂದಿಗೆ ಪಾವತಿಸಲು ಕಾಲಾವಕಾಶವಿರುತ್ತದೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಡಿ.ಬಿ.ನಟೇಶ್ ತಿಳಿಸಿದ್ದಾರೆ.

ಮಾಧ್ಯಮ ಹೇಳಿಕೆ ನೀಡಿರುವ ಅವರು ಇ-ಹರಾಜಿನಲ್ಲಿ ಖರೀದಿಸಲಾದ ನಿವೇಶನಗಳ ಬಾಕಿ ಮೌಲ್ಯ ಪಾವತಿಸಲು ಕೊರೋನಾ ವೈರಸ್ ವ್ಯಾಪಿಸಿರುವ ಹಿನ್ನೆಲೆಯಲ್ಲಿ ಸರ್ಕಾರವು  28/04/2021ರಿಂದ 14/06/2021ರವರೆಗೆ 48ದಿನಗಳ ಲಾಕ್ ಡೌನ್ ವಿಧಿಸಿದ್ದು ಬಿಡ್ಡುದಾರರು  ಹಣಕಾಸು ಸಂಸ್ಥೆ ಹಾಗೂ ಬ್ಯಾಂಕ್ ಗಳಿಂದ ಸಾಲ ಸೌಲಭ್ಯಗಳನ್ನು ಪಡೆಯಲು ಆಗದೇ ವಿಶೇಷ ಪರಿಸ್ಥಿತಿ ಎದುರಾಗಿರುವುದರಿಂದ ನಿವೇಶನದ ಶೇಖಡ 75ಭಾಗ ಹಣ ಪಾವತಿಸಲು ಲಾಕ್ ಡೌನ್ ಅವಧಿ 48ದಿನಗಳ (ಬಡ್ಡಿ ರಹಿತವಾಗಿ) ಕಾಲಾವಕಾಶವನ್ನು ವಿಸ್ತರಿಸಲಾಗಿರುತ್ತದೆ.

ಈಗ ಮೈಸೂರಿನಲ್ಲಿ 14/06/2021ರಿಂದ 5/7/2021ರವರೆಗೆ ಹೆಚ್ಚುವರಿ ಲಾಕ್ ಡೌನ್ ವಿಸ್ತರಿಸಿರುವುದರಿಂದ ಸಾರ್ವಜನಿಕರ ಮನವಿಯ ಮೇರೆಗೆ ಈ ಲಾಕ್ ಡೌನ್ ಅವಧಿಯ ಬಡ್ಡಿ ರಹಿತವಾಗಿ ಹಣ ಪಾವತಿಸಲು ಕಾಲಾವಕಾಶ 21ದಿನಗಳ (ಬಡ್ಡಿ ರಹಿತವಾಗಿ) ಹೆಚ್ಚುವರಿಯಾಗಿ ಕಾಲಾವಕಾಶ ವಿಸ್ತರಿಸಲಾಗಿರುತ್ತದೆ.

ಆದ್ದರಿಂದ ಕೋವಿಡ್-19 ಲಾಕ್ ಡೌನ್ ಸಂಬಂಧ ಹರಾಜಿನಲ್ಲಿ ಭಾಗವಹಿಸಿದ ಬಿಡ್ಡುದಾರರಿಗೆ ಶೇಖಡ 75ಭಾಗ ಹಣ ಪಾವತಿಸಲು ಸರ್ಕಾರ ವಿಧಿಸಿರುವ 28/4/2021ರಿಂದ 14/6/2021ರವರೆಗೆ 48ದಿನಗಳ ಜೊತೆಗೆ ಹೆಚ್ಚುವರಿಯಾಗಿ 14/06/2021ರಿಂದ 05/07/2021ರವರೆಗೆ 21ದಿನಗಳ ಲಾಕ್ ಡೌನ್ ವಿಸ್ತರಿಸಿರುವುದರಿಂದ ಕೋವಿಡ್ 19 ಅಸಾಧಾರಣ ಜಾಗತಿಕ ಪ್ರಕರಣವಾಗಿರುವುದರಿಂದ 21ದಿನಗಳ ಹೆಚ್ಚುವರಿಯಾಗಿ ಕಾಲಾವಕಾಶವನ್ನು ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: