ಕ್ರೀಡೆದೇಶಪ್ರಮುಖ ಸುದ್ದಿ

ಟೋಕಿಯೋ ಒಲಿಂಪಿಕ್ಸ್ : ಪದಕ ಗೆದ್ದ ದೆಹಲಿ ಆಟಗಾರರನ್ನು ಗೌರವಿಸಲಿದೆ ದೆಹಲಿ ಸರ್ಕಾರ : ಚಿನ್ನದ ಪದಕ ವಿಜೇತರಿಗೆ 3 ಕೋಟಿ ರೂ.

ದೇಶ(ನವದೆಹಲಿ)ಜು.10:- ಟೋಕಿಯೊ ಒಲಿಂಪಿಕ್ಸ್ 2020 ಕ್ಕೆ ಸಂಬಂಧಿಸಿದಂತೆ ಇಡೀ ದೇಶದಲ್ಲಿ ಸಂಭ್ರಮದ ವಾತಾವರಣವಿದೆ. ಒಲಿಂಪಿಕ್ಸ್‌ ನಲ್ಲಿ ದೆಹಲಿಯಿಂದ ನಾಲ್ಕು ಮಂದಿ ಆಟಗಾರರು ದೇಶವನ್ನು ಪ್ರತಿನಿಧಿಸುತ್ತಿದ್ದಾರೆ.   ಒಲಿಂಪಿಕ್ ಕ್ರೀಡಾಕೂಟ ಪ್ರಾರಂಭವಾಗುವ ಮುನ್ನ ದೆಹಲಿ ಸರ್ಕಾರವು  ಆಟಗಾರರನ್ನು ಪ್ರೋತ್ಸಾಹಿಸಲು ಹಾಗೂ ಹುರಿದುಂಬಿಸಲು ಬಹುಮಾನಗಳನ್ನು ಘೋಷಿಸಿದೆ.

ಟೋಕಿಯೊ ಒಲಿಂಪಿಕ್ಸ್‌ ನಲ್ಲಿ ಭಾಗವಹಿಸುವ ದೆಹಲಿಯ ಆಟಗಾರರು ಚಿನ್ನದ ಪದಕ ಗೆದ್ದಲ್ಲಿ 3 ಕೋಟಿ, ಬೆಳ್ಳಿ ಪದಕ ಗೆದ್ದಲ್ಲಿ 2 ಕೋಟಿ ಮತ್ತು ಕಂಚಿನ ಪದಕ ಗೆದ್ದಲ್ಲಿ 1 ಕೋಟಿ ರೂ. ನಗದು ಬಹುಮಾನ  ನೀಡಿ ಸನ್ಮಾನಿಸುವುದಾಗಿ ಘೋಷಿಸಿದೆ.

ಪದಕ ಗೆದ್ದ ಆಟಗಾರರ ಕೋಚ್‌ ಗೆ 10 ಲಕ್ಷ ರೂ. ನಗದು ಬಹುಮಾನ ನೀಡಿ ಸನ್ಮಾನಿಸಲಾಗುತ್ತದೆ. ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಅಧ್ಯಕ್ಷತೆಯಲ್ಲಿ ನಡೆದ ದೆಹಲಿ ಕ್ರೀಡಾ ವಿಶ್ವವಿದ್ಯಾಲಯದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಒಲಂಪಿಕ್ಸ್ ನಲ್ಲಿ ದೆಹಲಿಯಿಂದ ದೇಶವನ್ನು ಪ್ರತಿನಿಧಿಸುವ ಆಟಗಾರರಲ್ಲಿ ಮಾನಿಕಾ ಬತ್ರಾ, ದೀಪಕ್ ಕುಮಾರ್, ಅಮೋಜ್ ಜಾಕಬ್ ಮತ್ತು ಸಾರ್ಥಕ್ ಭಾಂಬ್ರಿ ಸೇರಿದ್ದಾರೆ. ಖೇಲ್ ರತ್ನ ವಿಜೇತ ಮಾನಿಕಾ ಬತ್ರಾ ಟೇಬಲ್ ಟೆನಿಸ್‌ ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ದೀಪಕ್ ಕುಮಾರ್ ಶೂಟಿಂಗ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದು, 10 ಮೀಟರ್ ಏರ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ದೆಹಲಿಯ ಗುರು ತೇಜ್ ಬಹದ್ದೂರ್ ಖಲ್ಸಾ ಕಾಲೇಜಿನ ವಿದ್ಯಾರ್ಥಿ ಅಮೋಜ್ ಜಾಕಬ್ 4 × 400 ಮೀಟರ್ ರಿಲೇಯಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ. ಮತ್ತು ಸಾರ್ಥಕ್ ಭಾಂಬ್ರಿ 4 × 400 ಮೀಟರ್ ರಿಲೇಯಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ.

ದೆಹಲಿ ಕ್ರೀಡಾ ವಿಶ್ವವಿದ್ಯಾಲಯದ ಸಭೆಯಲ್ಲಿ ವಿಶ್ವವಿದ್ಯಾಲಯದ ಉಪಕುಲಪತಿ ಕರ್ಣಂ ಮಲ್ಲೇಶ್ವರಿ ಕೂಡ ಭಾಗವಹಿಸಿದ್ದರು. ಟೋಕಿಯೊ ಒಲಿಂಪಿಕ್ಸ್ 2020 ರಲ್ಲಿ ಭಾಗವಹಿಸುವ ದೆಹಲಿಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಮತ್ತು ಬೆಂಬಲಿಸುವಲ್ಲಿ ದೆಹಲಿ ಕ್ರೀಡಾ ವಿಶ್ವವಿದ್ಯಾಲಯದ ಪಾತ್ರ ಮತ್ತು ಮುಂಬರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲು ಆಟಗಾರರನ್ನು ಸಿದ್ಧಪಡಿಸುವ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಯಿತು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: