ದೇಶಪ್ರಮುಖ ಸುದ್ದಿ

ಮಾಜಿ ಸಿಎಂ ಕಲ್ಯಾಣ್ ಸಿಂಗ್ ಆರೋಗ್ಯ ಸ್ಥಿರ: ಆಸ್ಪತ್ರೆ ಪ್ರಕಟಣೆ

ಲಖನೌ,ಜು.10- ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

ಇಲ್ಲಿನ ಸಂಜಯ್‌ ಗಾಂಧಿ ವೈದ್ಯಕೀಯ ವಿಜ್ಞಾನಗಳ ಸ್ನಾತಕೋತ್ತರ ಸಂಸ್ಥೆಯ (ಎಸ್‌ಜಿಪಿಜಿಐಎಂಎಸ್‌) ತೀವ್ರ ನಿಗಾ ಘಟಕದಲ್ಲಿ ಕಲ್ಯಾಣ್ ಸಿಂಗ್ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಿಂಗ್‌ ಅವರ ಆರೋಗ್ಯ ಸ್ಥಿರವಾಗಿವೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಹೃದ್ರೋಗ, ನರರೋಗ, ಎಂಡೊಕ್ರಿನಾಲಜಿ ಮತ್ತು ನೆಪ್ರೊಲಜಿ ಸೇರಿದಂತೆ ವಿವಿಧ ವಿಭಾಗಗಳ ತಜ್ಞರು ಅವರಿಗೆ ನೀಡುತ್ತಿರುವ ಚಿಕಿತ್ಸೆ ಬಗ್ಗೆ ನಿಗಾ ಇಟ್ಟಿದ್ದಾರೆ. ವೈದ್ಯಕೀಯ ವಿಜ್ಞಾನ ಕಾಲೇಜಿನ ನಿರ್ದೇಶಕ ಪ್ರೊ. ಆರ್‌.ಕೆ.ಧಿಮಾನ್‌ ಅವರು ಸಿಂಗ್‌ ನಿತ್ಯ ಚಿಕಿತ್ಸೆಯನ್ನು ಗಮನಿಸುತ್ತಿದ್ದಾರೆ ಎಂದು ಎಸ್‌ಜಿಪಿಜಿಐಎಂಎಸ್‌ ಪ್ರಕಟಣೆ ತಿಳಿಸಿದೆ.

ರಾಜಸ್ಥಾನದ ಮಾಜಿ ರಾಜ್ಯಪಾಲರೂ ಆಗಿದ್ದ ಬಿಜೆಪಿ ಮುಖಂಡ 89ರ ಹರೆಯದ ಕಲ್ಯಾಣ್‌ ಸಿಂಗ್‌, ಸೋಂಕು ಮತ್ತಿತರ ಆರೋಗ್ಯ ಸಮಸ್ಯೆಯಿಂದಾಗಿ ಜುಲೈ 4 ರಂದು ಇಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದರು. ಇದಕ್ಕೂ ಮುನ್ನ ಅವರು ಡಾ. ರಾಮ್‌ ಮನೋಹರ್ ಲೋಹಿಯಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: