ಮೈಸೂರು

ಸಾಮಾಜಿಕ ಬಹಿಷ್ಕಾರ ಸತ್ಯಕ್ಕೆ ದೂರವಾದ ಸಂಗತಿ : ಸಮಗ್ರ ತನಿಖೆಗೆ ಒತ್ತಾಯ

ಚಕ್ರಬಡ್ಡಿ ದಂಧೆಯಲ್ಲಿ ಖ್ಯಾತನಾಗಿರುವ ಹೆಚ್.ಡಿ.ಕೋಟೆಯ ಸಿದ್ದಾಪ್ಪಾಜಿ ರಸ್ತೆಯ ನಿವಾಸಿ ಸೋಮಣ್ಣ ಅಲಿಯಾಸ್ ಚಕ್ರಬಡ್ಡಿ ಚನ್ನ ನನ್ನ ಮೇಲೆ ಹೊರಿಸಿರುವ ಆರೋಪವು ಸತ್ಯಕ್ಕೆ ದೂರವಾಗಿದ್ದು ಈ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು  ಪುರಸಭೆ ಸದಸ್ಯ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಸಿ.ನರಸಿಂಹಮೂರ್ತಿ ಒತ್ತಾಯಿಸಿದರು.

ಗುರುವಾರ ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಸುದ್ದಿಗೋಷ್ಠಿ ನಡೆಸಿ  ನರಸಿಂಹಮೂರ್ತಿ ಸಾಮಾಜಿಕ ಬಹಿಷ್ಕಾರದ ಬಗ್ಗೆ ಸ್ಪಷ್ಟೀಕರಣ ನೀಡಿ ಹೆಚ್.ಡಿ.ಕೋಟೆ, ಸಿದ್ಧಪ್ಪಾಜಿ ರಸ್ತೆ ನಿವಾಸಿ ಸೋಮಣ್ಣ ತನ್ನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದು  ನ್ಯಾಯಕ್ಕೆ ಆಗ್ರಹಿಸಿದ್ದರು. ಈ ವಿಷಯ ಶುದ್ಧ ಸುಳ್ಳಿನ ಕಲ್ಪಿತ ಕಥೆಯಾಗಿದೆ, ಸೋಮಣ್ಣನಿಗೆ  30X40 ಅಳತೆಯ ಸುಸಜ್ಜಿತವಾದ ಮನೆಯೂ ಮುಕ್ತಾಯದ ಹಂತದಲ್ಲಿದೆ. ಹೀಗಿದ್ದು ಈತ ತನ್ನ ಹೆಂಡತಿ ಲತಾ ಹಾಗೂ ತಾಯಿ ತಾಯಮ್ಮ ಹೆಸರಿಗೆ ಎರಡು ಆಶ್ರಯ ಮನೆಗಳನ್ನು ಮಂಜೂರು ಮಾಡಿಸಿಕೊಂಡಿರುವುದಕ್ಕೇ ವಿರೋಧ ವ್ಯಕ್ತಪಡಿಸಿ, ಚುನಾಯಿತ ಅಧಿಕಾರಿಗೆ ತಕರಾರು ಅರ್ಜಿ ಸಲ್ಲಿಸಿದ್ದೆ. ಈ ಪ್ರಕರಣ ಜರುಗಿ ನಾಲ್ಕು ತಿಂಗಳು ಕಳೆದಿದೆ ಈಗ ಅದರ ನೆವದಲ್ಲಿ ವಿನಾಕಾರಣ ತೇಜೋವಧೆ ಮಾಡುತ್ತಿದ್ದಾನೆ ಎಂದು ಆರೋಪಿಸಿ. ಏ.22ರಂದು ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಜಯಂತಿಯನ್ನು ಅದ್ಧೂರಿಯಾಗಿ ಆಯೋಜಿಸಲಾಗಿತ್ತು ಆ ಸಂದರ್ಭವನ್ನೇ ದುರುಪಯೋಗಪಡಿಸಿಕೊಂಡ ಸೋಮಣ್ಣ ಹಾಗೂ ಕನ್ನಡ ಸೇನೆ ಜಿಲ್ಲಾಧ್ಯಕ್ಷ (ಉಚ್ಚಾಟಿತ) ಕ್ರಾಂತಿಕುಮಾರ್  ಚಂದಾ ವಸೂಲಿಗಿಳಿದಿದ್ದು ಇದನ್ನು ವಿರೋಧಿಸಿದ್ದಕ್ಕೆ ಪ್ರಕರಣವನ್ನು ತಿರುಚಿ ನನ್ನ ಮೇಲೆ ಸಾಮಾಜಿಕ ಬಹಿಷ್ಕಾರದ ಆರೋಪವನ್ನು ಹೊರಿಸುತ್ತಿದ್ದಾನೆಂದು ತೀವ್ರವಾಗಿ ಖಂಡಿಸಿದರು.

ಸೋಮಣ್ಣ ಚಕ್ರಬಡ್ಡಿ ದಂಧೆ ನಡೆಸುತ್ತಿದ್ದು 2015ರ ಅಕ್ಟೋಬರ್ 10ರಂದು ಹೆಚ್.ಡಿ.ಕೋಟೆಯ ಪೊಲೀಸರು ಈತನ ಮನೆ ಮೇಲೆ ದಾಳಿ ನಡೆಸಿ ಸುಮಾರು 23 ಲಕ್ಷ ರೂಪಾಯಿ ವ್ಯವಹಾರದ ದಾಖಲೆಗಳನ್ನು ವಶಪಡಿಸಿಕೊಂಡು ಆತನಿಗೆ ಲಕ್ಷಾಂತರ ರೂಪಾಯಿ ದಂಡ ವಿಧಿಸಿದ್ದರು. ಈತ ಕೂಲಿ ಕೆಲಸ ಮಾಡುತ್ತಿದ್ದರೆ ಪೊಲೀಸ್ ದಾಳಿ ವೇಳೆ ಆತನ ಮನೆಯಲ್ಲಿ ಲಕ್ಷಾಂತರ ರೂಪಾಯಿಗಳ ದಾಖಲೆಗಳ ಕಾಗದ ಪತ್ರಗಳು ಹೇಗೆ ಲಭ್ಯವಾದವು ಎಂದು ಪ್ರಶ್ನಿಸಿದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸ್ ವರಿಷ್ಠಾಧಿಕಾರಿಗಳು ಉನ್ನತ ತನಿಖಾ ತಂಡ ರಚಿಸಿ ಕೂಲಂಕುಷ ತನಿಖೆ ನಡೆಸಿ ಸತ್ಯಾಂಶವನ್ನು ಬಹಿರಂಗಗೊಳಿಸಬೇಕೆಂದು ಒತ್ತಾಯಿಸಿ, ಸೋಮಣ್ಣನ ವಿರುದ್ಧ ಹೆಚ್.ಡಿ.ಕೋಟೆಯ ನ್ಯಾಯಾಲಯದಲ್ಲಿ 50 ಲಕ್ಷ ರೂಪಾಯಿ ಮಾನನಷ್ಟ ಮೊಕದ್ದಮೆಯನ್ನು ಹೂಡಲಾಗಿದೆ ಎಂದು ತಿಳಿಸಿದರು.

ಹೆಚ್.ಡಿ.ಕೋಟೆಯ ನಾಗರಾಜು, ಕೃಷ್ಣ, ಮಹೇಶ್ ಹಾಗೂ ಫುಟ್ ಪಾತ್ ವ್ಯಾಪಾರಿ ಪುಟ್ಟಮಾದು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. (ಕೆ.ಎಂ.ಆರ್)

Leave a Reply

comments

Related Articles

error: