
ಕ್ರೀಡೆದೇಶಪ್ರಮುಖ ಸುದ್ದಿವಿದೇಶ
20ನೇ ಬಾರಿ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದು ಇತಿಹಾಸ ಸೃಷ್ಟಿಸಿದ ನೊವಾಕ್ ಜೋಕೋವಿಕ್
ದೇಶ(ನವದೆಹಲಿ)ಜು.12:- ವಿಂಬಲ್ಡನ್ 2021 ರ ಫೈನಲ್ ನಲ್ಲಿ ವಿಶ್ವದ ನಂಬರ್ ಒನ್ ನೊವಾಕ್ ಜೊಕೊವಿಕ್ ಇಟಲಿಯ ಮ್ಯಾಟಿಯೊ ಬೆರೆಟ್ಟಿನಿಯನ್ನು ಸೋಲಿಸುವ ಮೂಲಕ ತಮ್ಮ ವೃತ್ತಿಜೀವನದ 20 ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನು ಗೆದ್ದರು.
ಮೂರು ಗಂಟೆ 23 ನಿಮಿಷಗಳ ಕಾಲ ನಡೆದ ಫೈನಲ್ನಲ್ಲಿ ಜೊಕೊವಿಕ್ 6-7 (4), 6-4, 6-4, 6-3 ಸೆಟ್ಗಳಿಂದ ಇಟಲಿಯ ಬೆರೆಟ್ಟಿನಿಯನ್ನು ಸೋಲಿಸಿದರು. ಜೋಕೊವಿಕ್ ಗೆ ವಿಂಬಲ್ಡನ್ ನಲ್ಲಿ ಇದು ಸತತ ಮೂರನೇ ಪ್ರಶಸ್ತಿ.
ವಿಶ್ವದ ನಂಬರ್ ಒನ್ ನೊವಾಕ್ ಜೊಕೊವಿಕ್ ಕೆಲವು ವಿಚಿತ್ರ ಕ್ಷಣಗಳನ್ನು ಎದುರಿಸುತ್ತಿದ್ದರೂ, ಭಾನುವಾರ ಮ್ಯಾಟಿಯೊ ಬೆರೆಟ್ಟಿನಿಯನ್ನು ಸೋಲಿಸಿ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯಲ್ಲಿ ಆರನೇ ಬಾರಿಗೆ ಚಾಂಪಿಯನ್ ಆದರು. ಇದರೊಂದಿಗೆ ಅವರು 20 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳ ದಾಖಲೆಯನ್ನೂ ಸರಿಗಟ್ಟಿದರು. (ಏಜೆನ್ಸೀಸ್,ಎಸ್.ಎಚ್)