ಮೈಸೂರು

ದೇಶೀಯ ಪಾರಂಪರಿಕ ಆಟಗಳು ನಶಿಸದಂತೆ ನೋಡಿಕೊಳ್ಳಬೇಕು : ಇಂದ್ರಾಕ್ಷಿದೇವಿ

ಮೈಸೂರಿನ ಮೃಗಾಲಯದ ಎದುರು ರಾಮ್ ಸನ್ಸ್ ಕಲಾ ಪ್ರತಿಷ್ಠಾನ ವತಿಯಿಂದ  ಕ್ರೀಡಾ ಕೌಶಲ್ಯ ಪಾರಂಪರಿಕ ಹಾಸು ಆಟಗಳ ದ್ವೈವಾರ್ಷಿಕ ಪ್ರದರ್ಶನವನ್ನು ಹ್ಯಾಂಡಿಕ್ರಾಫ್ಟ್ ಸೇಲ್ಸ್ ಎಂಪೋರಿಯಮ್ ನಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮವನ್ನು ಮಹಾರಾಜಕುಮಾರಿ ಇಂದ್ರಾಕ್ಷಿ ದೇವಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಪ್ರಸ್ತುತ ಜಗತ್ತಿನಲ್ಲಿ ಫೇಸ್ ಬುಕ್, ವಾಟ್ಸ್ ಆ್ಯಪ್ ,  ಇನ್ನಿತರೇ  ಅಂತರ್ಜಾಲಗಳಿಗೆ ಜನರು, ಅದರಲ್ಲಿಯೂ ವಿದ್ಯಾರ್ಥಿಗಳು ಮಾರುಹೋಗುತ್ತಿದ್ದಾರೆ.ಇಂದಿನ ಯುವ ಪೀಳಿಗೆಗೆ  ಪಾರಂಪರಿಕ ಹಾಸು ಆಟೋಟಗಳು ತಿಳಿದಿಲ್ಲ. ಈ ದೇಶೀಯ ಪಾರಂಪರಿಕ ಆಟಗಳು ಇಂದು ನಮ್ಮ ಕಣ್ಣ ಮುಂದೆಯೇ ನಶಿಸಿ ಹೋಗುತ್ತಿದೆ. ಈ ನಿಟ್ಟಿನಲ್ಲಿ  ಜನಮಾನಸದಲ್ಲಿ ದೇಶೀಯ ಆಟಗಳನ್ನು ಮುಂದಿನ ಯುವ ಪೀಳಿಗೆಗೆ ಅನುಕೂಲವಾಗುವಂತೆ  ಜನರಿಗೆ  ಅರಿವು ಮೂಡಿಸಿ ಈ ಆಟಗಳೂ ನಶಿಸದಂತೆ ಜೀವಂತವಾಗಿ ಉಳಿಸಿಕೊಂಡು ಹೋಗಬೇಕೆಂಬ ಉದ್ದೇಶದಿಂದ ಈ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಈ ಆಟೋಟಗಳನ್ನು ಉಳಿಸಿ ಬೆಳೆಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದರು.

ಕಾರ್ಯಕ್ರಮದಲ್ಲಿ ರಾಜಚಂದ್ರ, ಡಾ.ಹೆಚ್.ಪಿ.ದೇವಕಿ ಹಾಗೂ ಇನ್ನಿತರರು ಹಾಜರಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: