ಕರ್ನಾಟಕಪ್ರಮುಖ ಸುದ್ದಿ

ಇಂದು ಮತ್ತು ನಾಳೆ ಜಿಲ್ಲೆಯ ವಿವಿಧೆಡೆ ಕೋವಿಡ್ ಲಸಿಕಾ ಅಭಿಯಾನ

ರಾಜ್ಯ(ಮಡಿಕೇರಿ) ಜು.13:- ಕೋವಿಡ್ 19 ಲಸಿಕಾ ಅಭಿಯಾನ ಸಂಬಂಧಿಸಿದಂತೆ ಜುಲೈ 13 ಮತ್ತು 14 ರಂದು ಜಿಲ್ಲೆಯ ವಿವಿಧ ಸಮದಾಯ ಮತ್ತು ಪ್ರಾಥಮಿಕ ಕೇಂದ್ರ ಹಾಗೂ ಉಪ ಕೇಂದ್ರಗಳಲ್ಲಿ ಕೋವಿಡ್ ಲಸಿಕಾ ಅಭಿಯಾನ ನಡೆಯಲಿದೆ.

ಮಡಿಕೇರಿ ನಗರದ ಐಟಿಐ ಕಾಲೇಜು 200 ವಿದ್ಯಾರ್ಥಿಗಳಿಗೆ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ, ವಿರಾಜಪೇಟೆ ತಾಲ್ಲೂಕಿನ ಗುಹ್ಯ ಆರೋಗ್ಯ ಉಪ ಕೇಂದ್ರದಲ್ಲಿ 300 ಮಂದಿಗೆ, ಕೊಂಡಗೇರಿ ಆರೋಗ್ಯ ಉಪ ಕೇಂದ್ರದಲ್ಲಿ 200 ಮಂದಿಗೆ ಮತ್ತು ಕಳತ್ಮಾಡು ಗ್ರಾಮದ ಕೈಕೇರಿ ಉಪ ಕೇಂದ್ರದಲ್ಲಿ 100 ಮಂದಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಗುತ್ತದೆ.

ಮಡಿಕೇರಿ ನಗರದ ಓಂಕಾರ ಸದನದಲ್ಲಿ 200 ಮಂದಿಗೆ, ಕಾವೇರಿ ಕಲಾಕ್ಷೇತ್ರದಲ್ಲಿ 100 ಮಂದಿಗೆ, ಕಡಗದಾಳು ಉಪ ಕೇಂದ್ರದಲ್ಲಿ 100 ಮಂದಿಗೆ ಸೋಮವಾರಪೇಟೆ ತಾಲ್ಲುಕಿನ ಆಲೂರು ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 100 ಮಂದಿಗೆ ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 100 ಮಂದಿಗೆ, ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 100 ಮಂದಿಗೆ, ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 150 ಮಂದಿಗೆ, ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ 100 ಮಂದಿಗೆ, ಸೋಮವಾರಪೇಟೆ ತಾಲ್ಲೂಕು ಆಸ್ಪತ್ರೆಯಲ್ಲಿ 150 ಮಂದಿಗೆ.

ಹಾಗೆಯೇ ವಿರಾಜಪೇಟೆ ತಾಲ್ಲೂಕಿನ ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 200 ಮಂದಿಗೆ. ಕಳತ್ಮಾಡು ಕೈಕೇರಿ ಉಪ ಕೇಂದ್ರದಲ್ಲಿ 100 ಮಂದಿಗೆ, ಕುಟ್ಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ 200 ಮಂದಿಗೆ, ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ 200 ಮಂದಿಗೆ, ವಿರಾಜಪೇಟೆ ತಾಲ್ಲೂಕು ಆಸ್ಪತ್ರೆಯಲ್ಲಿ 200 ಮಂದಿಗೆ ಕೋವಿಶೀಲ್ಡ್ ಲಸಿಕೆ ನೀಡಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲಾಣಾಧಿಕಾರಿ ಡಾ.ಕೆ.ಮೋಹನ್ ಅವರು ತಿಳಿಸಿದ್ದಾರೆ.

ಜುಲೈ, 14 ರಂದು ಕೋವಿಡ್ ಲಸಿಕಾ ಅಭಿಯಾನ ನಡೆಯಲಿದ್ದು, ಮಡಿಕೇರಿ ನಗರದ ಫೀಲ್ಡ್ ಮಾಷಲ್ ಕೆ.ಕಾರ್ಯಪ್ಪ ಕಾಲೇಜಿನಲ್ಲಿ ಐ.ಟಿ.ಐ ಕಾಲೇಜಿನ 120 ಮಂದಿಗೆ, ಭಾಗಮಂಡಲದ ಐಟಿಐ ಕಾಲೇಜು ವಿದ್ಯಾರ್ಥಿಗಳಿಗೆ ಭಾಗಮಂಡಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 50 ಮಂದಿಗೆ ಮತ್ತು ಪೊನ್ನಂಪೇಟೆಯ ಐ.ಟಿ.ಐ ಕಾಲೇಜಿನ 30 ವಿದ್ಯಾರ್ಥಿಗಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕೆ.ಮೋಹನ್ ಅವರು ತಿಳಿಸಿದ್ದಾರೆ.

ಆರೋಗ್ಯ ಸಂಸ್ಥೆಯಲ್ಲಿ ಲಭ್ಯವಿರುವ ಕೋವ್ಯಾಕ್ಸಿನ್ ಲಸಿಕೆಯನ್ನು ಮೊದಲ ಬಾರಿಗೆ 18 ವರ್ಷ ಮೇಲ್ಪಟ್ಟ ಕಾಲೇಜು ವಿದ್ಯಾರ್ಥಿಗಳಿಗೆ ನೀಡಲು ತಿಳಿಸಲಾಗಿದೆ. ಹಾಗೆಯೇ ಕೋವಿಶೀಲ್ಡ್ ಲಸಿಕೆಯನ್ನು ಎರಡನೇ ಬಾರಿಗೆ ಲಸಿಕೆ ನೀಡಲು ತಿಳಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲಾಣಾಧಿಕಾರಿ ಡಾ.ಕೆ.ಮೋಹನ್ ಹೇಳಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: