ಮೈಸೂರು

  ಶಿವರಾಜ್ ಕುಮಾರ್ ಹುಟ್ಟು ಹಬ್ಬದ ಹಿನ್ನೆಲೆ ಕರಿಚಿರತೆ ದತ್ತು ಪಡೆದ ಮೈಸೂರಿನ ಅಭಿಮಾನಿಗಳು

ಮೈಸೂರು,ಜು.12:- ಕರುನಾಡ ಚಕ್ರವರ್ತಿ ,ಹ್ಯಾಟ್ರಿಕ್ ಹೀರೋ ಡಾ.ಶಿವರಾಜಕುಮಾರ್ ಅವರ 59 ನೇ ವರ್ಷದ ಹುಟ್ಟು ಹಬ್ಬದ ಹಿನ್ನೆಲೆ ಮೈಸೂರು ಜಿಲ್ಲಾ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಮೈಸೂರಿನ ಮೃಗಾಲಯ ಪ್ರಾಧಿಕಾರದ ಆವರಣದಲ್ಲಿ 35 ಸಾವಿರ ರೂ ನೀಡಿ ಕರಿಚಿರತೆಯನ್ನು ದತ್ತು ಪಡೆದುಕೊಳ್ಳಲಾಯಿತು ಹಾಗೂ ಮಾಸ್ಕ್ ಹಾಗೂ ಸಿಹಿ ವಿತರಿಸಲಾಯಿತು .

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ಅವರು ದತ್ತು ಪಡೆದ ಒಪ್ಪಂದ ಪತ್ರವನ್ನು ನೀಡಿದರು. ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ ಎಲ್ ಆರ್ ಮಹದೇವಸ್ವಾಮಿ,ಜಿಲ್ಲಾಧ್ಯಕ್ಷರಾದ ಬಿ  ರವಿಚಂದ್ರ,ರಾಜ್ ಕುಮಾರ್ ಸಂಘದ ಅಧ್ಯಕ್ಷರಾದ ರಾಮೇಗೌಡ,ವಿನಯ್,ರಮ್ಮನಹಳ್ಳಿ ಸೋಮಣ್ಣ,ಫ್ಲವರ್ ಮಹೇಶ್,ಮಂಜಣ್ಣ,ಗಿರೀಶ್,ಆಟೋ ಮಹೇಶ್,ರೋಹಿತ್,ರಾಹುಲ್,ಮನು ,ಲೋಕಿ,ಮಂಡಕಳ್ಳಿ ರವಿಚಂದ್ರ,ಸೀನಾ ಕಾಟೂರು,ಮನು,ದೇವಲಾಪುರ ಮಹೇಶ್,ನಂಜನಗೂಡು ಕೃಷ್ಣ,ಆಟೋ ಶಿವು,ರಕ್ಷಿತ್ ಪ್ರಸನ್ನ,ಹರೀಶ್  ಮತ್ತಿತರರು ಪಾಲ್ಗೊಂಡಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: