ಕರ್ನಾಟಕಪ್ರಮುಖ ಸುದ್ದಿ

ನಟ ದರ್ಶನ್ 25 ಕೋಟಿ ವಂಚನೆ ಪ್ರಕರಣ ಸಂಬಂಧ ಸ್ಪಷ್ಟನೆ ನೀಡಿದ ನಿರ್ಮಾಪಕ ಉಮಾಪತಿ

ರಾಜ್ಯ( ಬೆಂಗಳೂರು)ಜು.12:- ನಟ ದರ್ಶನ್ 25 ಕೋಟಿ ವಂಚನೆ ಪ್ರಕರಣ ಸಂಬಂಧ ನಿರ್ಮಾಪಕ ಉಮಾಪತಿಯವರು ಸ್ಪಷ್ಟನೆ ನೀಡಿದ್ದಾರೆ.

ನಟ ದರ್ಶನ್ ಗೆ ನನಗೆ ಒಂದೇ ಕಾನೂನು ಎಂದು ನಿರ್ಮಾಪಕ ಉಮಾಪತಿ ತಿಳಿಸಿದ್ದಾರೆ 25ಕೋಟಿ ಪ್ರಕರಣದಲ್ಲಿ ನನ್ನನ್ನು ಸಿಕ್ಕಿಸುವ ಹುನ್ನಾರ ನಡೆದಿದೆ ಎಂದು ಉಮಾಪತಿ ಆರೋಪಿಸಿದ್ದಾರೆ ನನಗೆ 25 ಕೋಟಿ ರು ದೊಡ್ಡದಲ್ಲ ನನ್ನ ಬಳಿ ಸಾವಿರಾರು ಕೋಟಿ ಆಸ್ತಿ ಇದೆ  ನನ್ನ ಬಳಿ ಐದ ರಿಂದ ಆರು ಉದ್ಯಮ ಇದೆ.

ಸರ್ಕಾರಕ್ಕೆ ಕೋಟ್ಯಾಂತರ ರೂ ತೆರಿಗೆ ಕಟ್ಟುತ್ತೇನೆ. ನಾನು ಏಕೆ ಕಂಡವರ ಹಣಕ್ಕೆ ಆಸೆ ಪಡಲಿ. ನನ್ನ ಶ್ರಮದಿಂದ ಹಣ ಸಂಪಾದಿಸಿದ್ದೇನೆ. ನನಗೆ ಯಾರೂ ಬೇಕಾಗಿಲ್ಲ. ನಾನು ಯಾರಿಗಿಂತಲೂ ಕಡಿಮೆ ಇಲ್ಲ. ನಾನೇ ಕಿಂಗ್ ನನ್ನ ಮನೆ ಕಟ್ಟಿರುವ ಜಾಗವೇ ಒಂದೂವರೆ ಎಕರೆ. ನನ್ನ ಒಂದೊಂದು ಜಮೀನು 70ರಿಂದ 80 ಎಕರೆ ಇದೆ. ಇನ್ನೊಬ್ಬರ ಆಸ್ತಿ ಲಪಟಾಯಿಸುವ ದರ್ದು ನನಗಿಲ್ಲ ಎಂದ ಅವರು 48ಗಂಟೆ ಕಾಯಿರಿ ಎಲ್ಲಾ ವಿಷಯ ಬಯಲಾಗುತ್ತದೆ ಎಂದು  ತಿಳಿಸಿದರು.

ಇದರ ಜೊತೆಗೆ ನಾನು ತಪ್ಪೇ ಮಾಡದೆ ಇರುವಾಗ ನನ್ನ ತಪ್ಪನ್ನು ಒಪ್ಪಿಕೊಳ್ಳಿ ಎಂದು ಬಲವಂತ ಮಾಡಿರುವ ಅಧಿಕಾರಿ ಹೆಸರನ್ನು ಸದ್ಯದಲ್ಲೇ ಬಯಲು ಮಾಡುತ್ತೇನೆ. ನನಗೆ ಯಾರ ಭಯವೂ ಇಲ್ಲ ದರ್ಶನ ಸ್ನೇಹಿತರಿಂದ ಬೆದರಿಕೆ ಬಂದಿದೆ ಎಂದ ಅವರು ನನ್ನನ್ನು ಗುಂಡಿಟ್ಟು ಸಾಯಿಸುತ್ತಾರೆ ತಾಕತ್ತು ಇದೆಯಾ ಎಂದು ಪ್ರಶ್ನಿಸಿದರು.   ಪ್ರಕರಣ ಸಂಬಂಧ ತನಿಖೆಗೆ ನಾನು ಸಿದ್ಧನಿದ್ದೇನೆ ನಾನು ದರ್ಶನ್ ಕೇವಲ ಸ್ನೇಹಿತರು. ನನ್ನಿಂದ ದರ್ಶನ್ ಬದುಕ ಬೇಕಾಗಿಲ್ಲ ಅಥವಾ ನಾನು ಅವನಿಂದ ಬದುಕ ಬೇಕಾಗಿಲ್ಲ. ವಿಶ್ವಾಸಕ್ಕೆ ಕಟ್ಟುಬಿದ್ದು ಸಿನಿಮಾ ಮಾಡಿದೆ ಎಂದು ಪ್ರಶ್ನೆಯೊಂದಕ್ಕೆ  ಉತ್ತರಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: