ಮೈಸೂರು

   ಸರಕಾರಿ ಶಾಲೆಗಳಿಗೆ ಯೂಥ್ ಫಾರ್ ಸೇವಾ ಸಂಸ್ಥೆಯಿಂದ ಉಚಿತ ಶೌಚಾಲಯ ನಿರ್ಮಾಣ

ಮೈಸೂರು,ಜು.13:- ಯೂಥ್ ಫಾರ್ ಸೇವಾ ಸಂಸ್ಥೆಯು 2007 ನೇ ಸಾಲಿನಲ್ಲಿ ಪ್ರಾರಂಭಗೊಂಡು, ಮೈಸೂರು ಜಿಲ್ಲೆಯಾದ್ಯಾಂತ ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ, ಮತ್ತು ಸಮಾಜದ ಕಟ್ಟಕಡೆಯ ಸಮುದಾಯದ ಜೀವನೋಪಾಯಕ್ಕೆ ಸಂಬಂಧಿಸಿದ ಹಲವಾರು ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತ ತನ್ನ ಪಯಣವನ್ನು ಸಾಗಿಸುತ್ತಿದೆ.

ಯೂಥ್ ಫಾರ್ ಸೇವಾ ಭಾರತ 11 ರಾಜ್ಯಗಳಲ್ಲಿ ಯೂಥ್ ಫಾರ್ ಸೇವಾ ಸಂಸ್ಥೆಯು ತನ್ನ ಪೂರ್ಣಾವಧಿ ಕಾರ್ಯಕರ್ತರ ನೇತೃತ್ವದಲ್ಲಿ ಲಕ್ಷಾಂತರ ಸ್ವಯಂ ಸೇವಕರ ತಂಡವು ಸಾಮಾಜಿಕ ಪ್ರಜ್ಞೆ ಹೊಂದಿರುವ ವ್ಯಕ್ತಿಗಳಿಂದ ನಡೆಸಲ್ಪಡುವ ಸ್ವಾವಲಂಬಿ ಸಮಾಜವನ್ನು ನಿರ್ಮಿಸುವುದು ಇದರ ಗುರಿಯಾಗಿದೆ.

ಮೈಸೂರು ಜಿಲ್ಲೆಯಾದ್ಯಂತ ಮೈಸೂರು ನಗರ ಹಾಗೂ ಗ್ರಾಮಾಂತರ ತಾಲೂಕಿನ 39 ಸರಕಾರಿ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಜೋಡಿಸಿಕೊಂಡು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಕಳೆದ 4 ವರ್ಷಗಳಿಂದ ಶ್ರಮಿಸುತ್ತಿದೆ (ಉದಾ: ಹೂಟಗಳ್ಳಿ ಸರಕಾರಿ ಪ್ರೌಢ ಮತ್ತು ಹಿರಿಯ ಪ್ರಾಥಮಿಕ ಶಾಲೆ, ಹಿನಕಲ್  ಸರಕಾರಿ ಪ್ರೌಢ ಶಾಲೆ, ಮೇಟಗಳ್ಳಿ ಸರಕಾರಿ ಪ್ರೌಢ ಹಿರಿಯ ಪ್ರಾಥಮಿಕ ಶಾಲೆ, ಮಹಾರಾಜಾ ಸರಕಾರಿ ಪ್ರೌಢ ಶಾಲೆ, ಲಕ್ಷ್ಮೀಪುರಂ ಸರಕಾರಿ ಪ್ರೌಢ ಶಾಲೆ, ಸರಕಾರಿ ಬಾಲಿಕೆಯರ ಪ್ರೌಢ ಶಾಲೆ ಅಶೋಕಪುರಂ, ಸರಕಾರಿ ಪ್ರೌಢ ಮತ್ತು ಹಿರಿಯ ಪ್ರಾಥಮಿಕ ಶಾಲೆ ಕನಕಗಿರಿ, ಅನಿಕೇತನ ಸರಕಾರಿ ಪ್ರೌಢ ಮತ್ತು ಹಿರಿಯ ಪ್ರಾಥಮಿಕ ಶಾಲೆ ಕುವೆಂಪುನಗರ ಇತ್ಯಾದಿ)

ಅಲ್ಲದೇ, ನಂಜನಗೂಡು ಮತ್ತು ಹೆಗ್ಗಡದೇವನಕೋಟೆ ತಾಲೂಕಿನ 17 ಹಿಂದುಳಿದ ಸರಕಾರಿ ಶಾಲೆಗಳನ್ನು ಗುರುತಿಸಿ 3800 ಕ್ಕೂ ಹೆಚ್ಚು  ಮಕ್ಕಳ ಶೈಕ್ಷಣಿಕ ಸಬಲಕೀರಣಕ್ಕಾಗಿ ಬ್ಯಾಗ್, ನೋಟ್ ಬುಕ್ಕ, ಜಾಮೀಟ್ರೀ ಬಾಕ್ಸ್, ಶುದ್ಧ ಕುಡಿಯುವ ನೀರಿನ ಘಟಕ, ಕ್ರೀಡಾ ಸಾಮಗ್ರಿಗಳನ್ನು ವಿತರಣೆ ಮಾಡಲಾಗಿದೆ.

ಇದರಲ್ಲಿ 11 ಶಾಲೆಗಳಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ-ಕಪ್ಪಸೊಗೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ-ತರಗನಹಳ್ಳಿ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ-ನಲತಾಳಪುರ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ-ನಂಜಿಪೂರ, (ಹೆಗ್ಗಡದೇವನಕೋಟೆ ತಾಲೂಕು), ಸರಕಾರಿ ಹಿರಿಯ ಪ್ರಾಥಮಿಕ ಶಾಲೆ-ಕಲ್ಲಂಬಾಳು, (ಹೆಗ್ಗಡದೇವನಕೋಟೆ ತಾಲೂಕು), ಸರಕಾರಿ ಹಿರಿಯ ಪ್ರಾಥಮಿಕ ಶಾಲೆ-ಕಾಟೂರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ-ಕಾರ್ಯ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ-ಆಕಲ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ-ಹರದನಹಳ್ಳಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ-ಕಟ್ಟೆಹುನಸೂರು, ಮತ್ತು ಸರಕಾರಿ ಪ್ರೌಢ ಶಾಲೆ-ಬಿದರಗೂಡು. ಶಾಲೆಗಳಿಗೆ ಸುಮಾರು ನಾಲ್ಕು ಲಕ್ಷ ಇಪ್ಪತ್ತು ಸಾವಿರ ರೂಪಾಯಿಯ ಹೈಟೆಕ್ ಶೌಚಾಲಯಗಳನ್ನು ನಿರ್ಮಿಸಿಕೊಡಲಾಗಿದೆ.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ-ಆಕಲ, ಸರಕಾರಿ ಪ್ರೌಢ ಶಾಲೆ-ಬಿದರಗೂಡು ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ-ಕಾರ್ಯ ಶಾಲೆಗಳಿಗೆ ಸಂಪೂರ್ಣವಾಗಿ ನಿರ್ಮಿಸಿ ಶಾಲೆಯ ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಕ್ಷಕರು ಮತ್ತು ಶಿಕ್ಷಕ ವೃಂದ ಮತ್ತು ಯೂಥ್ ಫಾರ್ ಸೇವಾ ಸಂಸ್ಥೆಯ ಜಿಲ್ಲಾ ಸಂಯೋಜಕರಾದ   ಸತೀಶ ಮೇತ್ರಿ,   ಯಶ್ವಂತ ಹಾಗು ಸ್ವಯಂ ಸೇವಕರಾದ   ಶಿವಪ್ರಕಾಶ ಅವರು ಹಾಜರಿದ್ದರು.

ಕಾರ್ಯಕ್ರಮದಲ್ಲಿ ಯೂಥ್ ಫಾರ್ ಸೇವಾ ಸಂಸ್ಥೆಯ ಜಿಲ್ಲಾ ಸಂಯೋಜಕರಾದ  ಸತೀಶ ಮೇತ್ರಿ ಮಾತನಾಡಿ  ಯೂಥ್ ಫಾರ್ ಸೇವಾ ಸಂಸ್ಥೆಯು ಕೈಗೊಳ್ಳುತ್ತಿರುವ ಹಲವಾರು ಚಟುವಟಿಕೆಗಳಲ್ಲಿ ಪರಿಸರ ಸಂರಕ್ಷಣೆ ಮತ್ತು ನೈರ್ಮಲ್ಯಕ್ಕೆ ಆದ್ಯತೆಯನ್ನು ನೀಡುತ್ತಿದೆ. ಆ ನಿಟ್ಟಿನಲ್ಲಿ ಗ್ರಾಮೀಣ ಶಾಲಾ ಮಕ್ಕಳ ಆರೋಗ್ಯ, ಶುಚಿತ್ವ, ನೈರ್ಮಲ್ಯಕ್ಕೆ ಪ್ರಾಮುಖ್ಯತೆಯನ್ನು ನೀಡಿ ಅವಶ್ಯಕತೆ ಇರುವ ಶಾಲೆಗಳಿಗೆ ನಿರ್ಮಾಣ ಮಾಡಿ ಕೊಟ್ಟಿದೆ. ಅದನ್ನು ಉತ್ತಮ ರೀತಿಯಲ್ಲಿ ಬಳಕೆ ಮತ್ತು ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗುವುದು ಪ್ರತಿಯೊಬ್ಬ ವಿದ್ಯಾರ್ಥಿ ಹಾಗೂ ಶಿಕ್ಷಕರ ಜವಾಬ್ದಾರಿ. ಅಲ್ಲದೇ ಸರ್ವರೂ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡುವ ಪರಿಸ್ಥತಿ ನಿರ್ಮಾಣವಾಗಿದೆ. ಆರೋಗ್ಯವೇ ಮಹಾ ಭಾಗ್ಯವಾಗಿದೆ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಇದೆ. ಹಾಗಾಗಿ ಕೊರೋನಾ ಮಹಾಮಾರಿಯ ಕುರಿತು ಎಲ್ಲರೂ ಜಾಗೃತರಾಗಿರೋಣ ಎಂದು ಕಿವಿಮಾತನ್ನು ಹೇಳಿದರು.

ಶಾಲೆಗಳ ಮುಖ್ಯ ಶಿಕ್ಷಕರುಗಳು ಮಾತನಾಡಿ ಸರಕಾರವು ಪೂರೈಸಲಾಗದ ಬಹುದೊಡ್ಡ ಕೊರತೆಯನ್ನು ನೀಗಿಸಿದೆ. ಅಲ್ಲದೇ ಹೆಣ್ಣು ಮಕ್ಕಳ ಮರ್ಯಾದೆಯನ್ನು ಕಾಪಾಡುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದು, ಯೂಥ್ ಫಾರ್ ಸೇವಾ ಸಂಸ್ಥೆಗೆ ಧನ್ಯವಾದಗಳನ್ನು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: