ಮೈಸೂರು

ಸಾತಗಳ್ಳಿ ನಿವಾಸಿಗಳಿಂದ 40ಲಕ್ಷರೂ.ಹಣ ಪಡೆದು ವಂಚಿಸಿದ್ದ ಮಹಿಳೆಯ ಬಂಧನ

ಮೈಸೂರು,ಜು.13:- ಸಾತಗಳ್ಳಿ ನಿವಾಸಿಗಳಿಂದ 40ಲಕ್ಷರೂ.ಹಣವನ್ನು ವಿವಿಧ ವ್ಯವಹಾರಗಳಿಗಾಗಿ ಪಡೆದು ವಂಚಿಸಿದ್ದ ಮಹಿಳೆಯನ್ನು ಉದಯಗಿರಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತಳನ್ನು ಹೇಮಲತಾ ಎಂದು ಹೇಳಲಾಗಿದೆ. ಈಕೆ ಮೋಜು ಮಸ್ತಿಗಾಗಿ ಹಣವನ್ನು ಖರ್ಚು ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ. ದೇವರು ಧರ್ಮದ ಹೆಸರೇಳಿಕೊಂಡು ನೆರೆಹೊರೆಯವರ ವಿಶ್ವಾಸ ಗಳಿಸಿದ್ದ ಈಕೆ ಚೀಟಿ ವ್ಯವಹಾರ ಮತ್ತು ಇನ್ನಿತರ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವಂತೆ ಪುಸಲಾಯಿಸಿ ನೆರೆಹೊರೆಯ ಗೃಹಿಣಿಯರಿಂದ ಸುಮಾರು 40ಲಕ್ಷದಷ್ಟು ಹಣವನ್ನು ಪಡೆದು ನಂತರ ಪರಾರಿಯಾಗಿದ್ದಳು. ಹಾಸನಜಿಲ್ಲೆಯಲ್ಲಿ ಸಂಬಂಧಿಕರ ಮನೆಯಲ್ಲಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಮಹಿಳೆಯ ಪತಿ ಬ್ಯಾಂಕ್ ನ ನಿವೃತ್ತ ಅಧಿಕಾರಿಯಾಗಿದ್ದು ವಿಚ್ಛೇದನ ಪಡೆದಿದ್ದಾರೆ. ಇಬ್ಬರು ಮಕ್ಕಳಿದ್ದು ಓರ್ವ ಇಂಜಿನಿಯರ್, ಮತ್ತೋರ್ವ ಚಾರ್ಟರ್ಡ್ ಅಕೌಂಟೆಂಟ್, ಆದರೆ ಮಹಿಳೆ ಇವರೆಲ್ಲರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಆರೋಪಿಯು ಗೃಹಿಣಿಯರಿಂದ ಸಂಗ್ರಹಿಸಿದ ಹಣವನ್ನು ವಿದೇಶ ಪ್ರವಾಸಕ್ಕೆ ಬಳಕೆ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: