ಮೈಸೂರು

ನಾಳೆ ಬಿಜೆಪಿ ಹಿಂದುಳಿದ ಮೋರ್ಚಾ ವತಿಯಿಂದ ವೃಕ್ಷಾರೋಪಣ ಕಾರ್ಯಕ್ರಮ

ಮೈಸೂರು,ಜು.13:- ಶ್ಯಾಂ ಪ್ರಸಾದ್ ಮುಖರ್ಜಿ ಯವರ ಪುಣ್ಯ ಸ್ಮರಣೆ ಹಾಗೂ ಜನ್ಮದಿನದ ಅಂಗವಾಗಿ ಕರ್ನಾಟಕ ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗಿದ್ದು, ಮೈಸೂರಿನಲ್ಲಿಯೂ  ವೃಕ್ಷಾರೋಪಣ ಕಾರ್ಯಕ್ರಮವನ್ನು ನಾಳೆ ಕರ್ನಾಟಕ ರಾಜ್ಯ ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಹಮ್ಮಿಕೊಳ್ಳಲಾಗಿದೆ.

ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ  ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಹಾಗೂ ರಾಜ್ಯ ವೃಕ್ಷಾರೋಪಣದ ಸಂಚಾಲಕರಾದ ಗೋವಿಂದರಾಜು   ಮಾತನಾಡಿ ಕೋವಿಡ್2.0 ಸಂದರ್ಭದಲ್ಲಿ ಆಕ್ಸಿಜನ್ ಕೊರತೆ ಉಂಟಾಗಿರುವುದನ್ನು ಮನಗಂಡ ಭಾ.ಜ.ಪ.ಒಂದು ಕೋಟಿ ಗಿಡಗಳನ್ನು ನೆಟ್ಟು ಪೋಷಣೆ ಮಾಡುವ ಗುರಿ ಹೊಂದಿದೆ.  ಕಾರಣ ಒಬ್ಬ ಮನುಷ್ಯ ನಿಗೆ ಒಂದು ದಿನಕ್ಕೆ ಏಳು ಮರಗಳ ಆಕ್ಸಿಜನ್ ಅವಶ್ಯಕತೆ ಇದೆ. ವಿಜ್ಞಾನಿಗಳ ಸಲಹೆಯಂತೆ  ಮುಂದಿನ ಯುವ ಪೀಳಿಗೆಗೆ ಆಕ್ಸಿಜನ್ ನ ಕೊರತೆಯಾಗಬಾರದೆಂಬ ನಿಟ್ಟಿನಲ್ಲಿ  ಮೈಸೂರು ನಗರ ಮತ್ತು ಗ್ರಾಮಾಂತರ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಒಂದು ಲಕ್ಷ ಸೀಡ್ ಬಾಲ್ ಗಳನ್ನು   ಉತ್ತನಹಳ್ಳಿ ರಿಂಗ್ ರಸ್ತೆಯಲ್ಲಿ ನಮ್ಮೆಲ್ಲ ಕಾರ್ಯಕರ್ತರು ತಯಾರಿಸುತ್ತಿದ್ದು,  ನಂತರ   ಸಾಂಪ್ರದಾಯಿಕ ವಾಗಿ ಚಾಮುಂಡಿ ಬೆಟ್ಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೀಡ್ ಬಾಲ್ ಎಸೆಯುವ ಮೂಲಕ   ಭಾ.ಜ.ಪ.ರಾಜ್ಯ ಅಧ್ಯಕ್ಷರು ಹಾಗೂ ಸಂಸದರಾದ ನಳಿನ್ ಕುಮಾರ್ ಕಟೀಲು ಅವರು ಚಾಲನೆ ನೀಡಲಿದ್ದಾರೆ ಎಂದರು.

ಇವರ ಜೊತೆ ರಾಜ್ಯ ಒ.ಬಿ.ಸಿ.ಅಧ್ಯಕ್ಷರಾದ ನೆ.ಲ.ನರೇಂದ್ರ ಬಾಬು, ಮೈಸೂರು ಮತ್ತು ಕೊಡಗು ಸಂಸದರಾದ ಪ್ರತಾಪ ಸಿಂಹ, ಜಿಲ್ಲಾ ಮಂತ್ರಿಗಳಾದ ಎಸ್.ಟಿ.ಸೋಮಶೇಖರ್, ಶಾಸಕರುಗಳಾದ ರಾಮದಾಸ್, ನಾಗೇಂದ್ರ, ವಿಶ್ವನಾಥ್, ರಾಜ್ಯ ಪ್ರಧಾನ ಕಾರ್ಯದರ್ಶಿ ಗಳಾದ ಸಿದ್ದರಾಜು,ವಿಭಾಗ ಪ್ರಭಾರಿ ಮೈ.ವಿ.ರವಿಶಂಕರ್, ನಗರ ಅಧ್ಯಕ್ಷರಾದ ಟಿ.ಎಸ್.ಶ್ರೀ ವತ್ಸ,ಗ್ರಾಮಾಂತರ ಅಧ್ಯಕ್ಷರಾದ ಮಂಗಳಾ ಸೋಮಶೇಖರ್,ಒ.ಬಿ.ಸಿ.ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್ ಬಾಬು ಮತ್ತು ಇನ್ನಿತರೆ ನಾಯಕರು ಗಳು ಉಪಸ್ಥಿತರಿರಲಿದ್ದು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ತಯಾರು ಮಾಡಿದ ಸೀಡ್ ಬಾಲ್ ಗಳನ್ನು ಚಾಮುಂಡಿ ಬೆಟ್ಟ, ಹೆಚ್.ಡಿ.ಕೋಟೆಯ ಸುತ್ತ ಮುತ್ತಲಿನ ಕಾಡಿನ ಪ್ರದೇಶ, ಹುಣಸೂರಿನ ಕಾಡಿನ ಪ್ರದೇಶ,ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಪ್ರದೇಶ,ಪಿರಿಯಾಪಟ್ಟಣದ ಸುತ್ತಮುತ್ತಲಿನ ಗುಡ್ಡಗಾಡಿನ ಪ್ರದೇಶದಲ್ಲಿ ಸುಮಾರು ಒಂದು ಲಕ್ಷ ಸಂಖ್ಯೆಯ ರಕ್ತ ಚಂದನ,ಬೇವು,ಹೊಂಗೆ, ಗುಲ್ ಮೊಹರ್ ,ಕಾಡು ಬಾದಾಮಿ,ಬಿದಿರು,ನೇರಳೆ,ಹತ್ತಿ ಮುಂತಾದ ಸೀಡ್ ಬಾಲ್ ಗಳನ್ನು ಭಾ.ಜ.ಪ.ಕಾರ್ಯಕರ್ತರು ಗಳು ಹಾಕಲಿದ್ದಾರೆ,

ಇದರ ತಯಾರಿಕೆಗೆ ಸುಮಾರು ಹತ್ತು ಟನ್ ಗೊಬ್ಬರ, ಒಂದು ಲಕ್ಷ ಎಲ್ಲಾ ತಳಿಯ ಬೀಜಗಳು, ಹತ್ತು ಟನ್ ಕೆಂಪು ಮಣ್ಣು, ನಾಲ್ಕು ಟನ್ ನೀರು ಮಿಶ್ರಿತ ಕಪ್ಪು ಮಣ್ಣು ತಯಾರು ಮಾಡಲು ಸುಮಾರು ನೂರು ಜನ ಕಾರ್ಯಕರ್ತರು ತೊಡಗಿರುವುದು ವಿಶೇಷ ಎಂದು ತಿಳಿಸಿದರು.

ನಗರ ಅಧ್ಯಕ್ಷರಾದ ಜೋಗಿಮಂಜು ಮಾತನಾಡಿ ಕೇಂದ್ರ ಸಚಿವ ಸಂಪುಟದಲ್ಲಿ ಕರ್ನಾಟಕ ರಾಜ್ಯಕ್ಕೆ ಸಿಂಹಪಾಲು,ಅಂದರೆ ರಾಜ್ಯದಿಂದ ಆಯ್ಕೆ ಯಾದವರ   ಪೈಕಿ ಶೇಕಡಾ25% ರಷ್ಟು ಮಂತ್ರಿಗಳಾಗಿ ಆಯ್ಕೆಯಾಗಿದ್ದಾರೆ, ಅದರಲ್ಲೂ ಕೂಡ ಮಂತ್ರಿಮಂಡಲದಲ್ಲಿ 27ಜನ ಹಿಂದುಳಿದ ವರ್ಗದವರು ಮಂತ್ರಿಗಳಾಗಿರುವುದು   ಹಿಂದುಳಿದ ವರ್ಗದಲ್ಲಿರುವ 126 ಸಮಾಜಕ್ಕೆ ಸಂದ ಗೌರವ. ಹಾಗೆಯೇ ಎಸ್ಸಿ, ಎಸ್ ಟಿಯ ಸಮಾಜದವರನ್ನೂ 20 ಜನ ಮಂತ್ರಿ ಮಾಡಿರುವುದು ವಿಶೇಷ. ಅದರಲ್ಲೂ ಸಮಾಜದಲ್ಲಿ ತುಳಿತಕ್ಕೆ ಒಳಗಾದ ಸಮಾಜವನ್ನು ಗುರುತಿಸಿ ಸಾಮಾಜಿಕ ನ್ಯಾಯ ನೀಡಿದ  ಪ್ರಧಾನ ಮಂತ್ರಿಗಳಾದ   ನರೇಂದ್ರ ಮೋದಿ ಯವರಿಗೆ ನಗರ ಒ.ಬಿ.ಸಿ.ಘಟಕ ತುಂಬು ಹೃದಯದಿಂದ ಅಭಿನಂದಿಸುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಒ.ಬಿ.ಸಿ.ಉಪಾಧ್ಯಕ್ಷ ರಾದ ಗೋವಿಂದರಾಜು,   ಗ್ರಾಮಾಂತರ ಅಧ್ಯಕ್ಷರಾದ ಪರಶುರಾಮಪ್ಪ,ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಮೈ.ಪು.ರಾಜೇಶ್,ಉಮೇಶ್, ರಾಜ್ಯ ಒ.ಬಿ.ಸಿ.ಸೋಶಿಯಲ್ ಮೀಡಿಯಾ ಸಹ ಸಂಚಾಲಕ ಸು.ಮುರುಳಿ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: