ಕ್ರೀಡೆಪ್ರಮುಖ ಸುದ್ದಿ

ಕನಸಿನ ತಂಡ ಪ್ರಕಟ : ಟಿ20 ಆಡುವ ಸಾಮರ್ಥ್ಯ ಧೋನಿಗಿಲ್ಲ ಎಂದ ಗಂಗೂಲಿ

ಮುಂಬೈ: ಭಾರತ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ತಮ್ಮ ಕನಸಿನ ಐಪಿಎಲ್‌ ತಂಡ ಆಯ್ಕೆ ಮಾಡಿದ್ದು, ಭಾರತಕ್ಕೆ ಟಿ20 ವಿಶ್ವ ಕಪ್, ಏಕದಿನ ವಿಶ್ವ ಗೆದ್ದುಕೊಟ್ಟ ಮಹೇಂದ್ರ ಸಿಂಗ್ ದೋನಿಗೆ ಸ್ಥಾನ ನೀಡಿಲ್ಲ. ಬದಲಿಗೆ ಡೆಲ್ಲಿ ಡೇರ್‌ ಡೆವಿಲ್ಸ್‌ ತಂಡದ ರಿಷಬ್ ಪಂತ್‌ಗೆ ವಿಕೆಟ್‌ ಕೀಪಿಂಗ್‌ ಜವಾಬ್ದಾರಿ ನೀಡುವ ಮೂಲಕ ಸುದ್ದಿಯಾಗಿದ್ದಾರೆ.

ಈಚೆಗಷ್ಟೆ ದೋನಿಯಲ್ಲಿ ಟಿ20 ಆಟಗಾರನ ಸಾಮರ್ಥ್ಯವಿಲ್ಲ ಎಂಬ ಶಂಕೆಯನ್ನು ಗಂಗೂಲಿ ವ್ಯಕ್ತಪಡಿಸಿದ್ದರು. ದೋನಿ ಅತ್ಯುತ್ತಮ ಟಿ20 ಆಟಗಾರ ಎಂದು ನನಗೆ ಬಲವಾಗಿ ಅನ್ನಿಸುತ್ತಿಲ್ಲ. ಏಕದಿನ ಕ್ರಿಕೆಟ್‌ ಮಾದರಿಯಲ್ಲಿ ದೋನಿ ಚಾಂಪಿಯನ್‌ ಆಟಗಾರ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಕಳೆದ 10 ವರ್ಷಗಳಲ್ಲಿ ಟಿ20 ಮಾದರಿಯಲ್ಲಿ ದೋನಿ ಗಳಿಸಿರುವುದು ಏಕೈಕ ಅರ್ಧಶತಕ. ಇದು ಅತ್ಯುತ್ತಮ ದಾಖಲೆಯಲ್ಲ ಎಂದು ‘ದಾದಾ’ ಎಂದೇ ಪ್ರಸಿದ್ಧರಾದ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

ತಮ್ಮ ಆಯ್ಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಗಂಗೂಲಿ ಭಾರಿ ಟೀಕೆಗೆ ಗುರಿಯಾಗಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ನಾಯಕ ಗಂಗೂಲಿ, ‘ದೋನಿಗೆ ಅಪಾರ ಅಭಿಮಾನಿಗಳಿದ್ದಾರೆ. ಎಂಸಿಡಿಯನ್ನು ಏಕೆ ಟೀಕಿಸುತ್ತೀರಿ ಎಂದು ಪ್ರಶ್ನಿಸುತ್ತಾರೆ. 2006ರಲ್ಲಿ ನನ್ನನ್ನು ತಂಡದಿಂದ ಕೈಬಿಟ್ಟಾಗಲು ಅಭಿಮಾನಿಗಳು ಇದೇ ರೀತಿ ಪ್ರತಿಕ್ರಿಯಿಸಿದ್ದರು’ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ಐಪಿಎಲ್‌ 10ರಲ್ಲಿ ಎಂಟು ಪಂದ್ಯಗಳನ್ನಾಡಿರುವ ದೋನಿ ಏಕೈಕ ಅರ್ಧಶತಕವನ್ನೊಳಗೊಂಡು ಕೇವಲ 152 ರನ್‌ ಗಳಿಸಿದ್ದಾರೆ. ಈಚೆಗಷ್ಟೆ ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕೆಲ್‌ ಕ್ಲಾರ್ಕ್‌ ತಮ್ಮ ಕನಸಿನ ಐಪಿಎಲ್‌ ತಂಡದಲ್ಲೂ ದೋನಿಗೆ ಸ್ಥಾನ ನೀಡಿರಲಿಲ್ಲ.

ಗಂಗೂಲಿ ಆಯ್ಕೆಯ ಐಪಿಎಲ್‌ ಕನಸಿನ ತಂಡ ಇಂತಿದೆ:

ವಿರಾಟ್‌ ಕೊಹ್ಲಿ (ಆರ್‌ಸಿಬಿ), ಗೌತಮ್‌ ಗಂಭೀರ್‌ (ಕೆಕೆಆರ್‌), ಸ್ಟೀವನ್‌ ಸ್ಮಿತ್‌ (ಆರ್‌ಪಿಎಸ್‌), ಎಬಿ ಡಿವಿಲಿಯರ್ಸ್‌ (ಆರ್‌ಸಿಬಿ), ನಿತೀಶ್‌ ರಾಣಾ (ಎಂಐ), ಮನೀಷ್‌ ಪಾಂಡೆ (ಕೆಕೆಆರ್‌), ರಿಷಬ್‌ ಪಂತ್‌ (ಡಿಡಿ), ಸುನಿಲ್‌ ನಾರಾಯಣ್‌ (ಕೆಕೆಆರ್), ಅಮಿತ್‌ ಮಿಶ್ರಾ (ಡಿಡಿ), ಭುವನೇಶ್ವರ ಕುಮಾರ್ (ಎಸ್‌ಆರ್‌ಎಚ್‌), ಕ್ರಿಸ್‌ ಮೋರಿಸ್‌ (ಡಿಡಿ).

(ಜಿ.ಪಿ)

Leave a Reply

comments

Related Articles

error: