ಮನರಂಜನೆಮೈಸೂರು

ಜ್ಯೂನಿಯರ್ ಕ್ರೇಜೀ ಬಿಗ್ ಬಾಸ್ ರಿಯಾಲಿಟ್ ಶೋ : ಅಡಿಷನ್

ಜ್ಯೂನಿಯರ್ ಕ್ರೇಜೀ ಬಿಗ್ ಬಾಸ್ ರಿಯಾಲಿಟಿ ಶೋವನ್ನು ಮೈಸೂರಿನ ಶ್ರೀಗುರುಮಂತ್ರಾಲಯ ಮೀಡಿಯಾ ಹೌಸ್ ಹಾಗೂ ಸಮರ ಟಿವಿ ಸಹಯೋಗದೊಂದಿಗೆ ಆಯೋಜಿಸಲಾಗಿದೆ ಎಂದು ಸಮರ ಟಿವಿ ಬಿ.ಎನ್.ನಟರಾಜ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ರಿಯಾಲಿಟಿ ಶೋ ಅಡಿಷನ್ ಮೇ.20 ರಿಂದ 22ರವರೆಗೆ ಮೂರು ದಿನಗಳ ಕಾಲ ಬೆಳಿಗ್ಗೆ 8 ರಿಂದ 6ರವರೆಗೆ ಓರಿಯಲ್ ರೆಸಾರ್ಟ್ ನಲ್ಲಿ ನಡೆಯಲಿದ್ದು,  10 ರಿಂದ 16 ವರ್ಷದೊಳಗಿನ ಮಕ್ಕಳು ಪಾಲ್ಗೊಳ್ಳಬಹುದು. ಮಕ್ಕಳಲ್ಲಿರುವ ಅಸಾಮಾನ್ಯ ಪ್ರತಿಭೆಯನ್ನು ಗುರುತಿಸಿ ಆಯ್ಕೆ ಮಾಡಲಾಗುವುದು, ಇದೊಂದು ವಿನೂತನ ಕಾರ್ಯಕ್ರಮವಾಗಿದ್ದು ರಾಷ್ಟ್ರೀಯ ವಾಹಿನಿಗಳಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಗೂ ಇದಕ್ಕೂ ಯಾವುದೇ ಸಾಮ್ಯತೆ ಇಲ್ಲ, ಶೋ ಕೇವಲ 20 ದಿನಗಳ ಕಾಲ ನಡೆಯಲಿದ್ದು ಸುಮಾರು 15 ಜನ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುವುದು, ಅಕ್ಟೋಬರ್ ದಸರಾ ರಜೆ ಸಮಯದಲ್ಲಿ ಚಿತ್ರೀಕರಣ ನಡೆಸಲಾಗುವುದು ಎಂದು ತಿಳಿಸಿದ ಅವರು, ಅರ್ಜಿ ಶುಲ್ಕ 200 ರೂಪಾಯಿಯಾಗಿದೆ, ರಿಯಾಲಿಟಿ ಶೋನಲ್ಲಿ ಆಯ್ಕೆಯಾದ ಸ್ಪರ್ಧಿಗಳ ಪೋಷಕರಿಗೂ ವಸತಿ ವ್ಯವಸ್ಥೆ ಮಾಡಲಾಗಿದೆ, ವಿಜೇತರಿಗೆ 10 ಲಕ್ಷ ರೂಪಾಯಿ ಬಹುಮಾನವಿದೆ, ಭಾರತದ ಯಾವುದೇ ಮೂಲೆಯ ಮಕ್ಕಳೂ ಭಾಗವಹಿಸಬಹುದು, ಶೋನಲ್ಲಿ ಭಾಗವಹಿಸುವವರಿಗೆ ಮೆಡಿಕಲ್ ಹಾಗೂ ಶಾಲಾ ದೃಢೀಕರಣ ಪತ್ರ ಕಡ್ಡಾಯವಾಗಿದೆ, ವ್ಯಕ್ತಿತ್ವ ವಿಕಸನ ಸೇರಿದಂತೆ ಪ್ರತಿ ದಿನ ವಿನೂತನ ವಿಷಯಗಳಾಧಾರಿತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ, ಸಮಾರೋಪ ಸಮಾರಂಭದಲ್ಲಿ ಖ್ಯಾತ ನಟ ಕ್ರೇಜಿ ಸ್ಟಾರ್ ರವಿಚಂದ್ರನ್ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸುವರು ಎಂದು ತಿಳಿಸಿದರು.

ಅರ್ಜಿಗಳು ಸಮರ ಟಿವಿ ಕಾರ್ಯಾಲಯದಲ್ಲಿ, ಶ್ರೀಗಣೇಶ ಫೋಟೋ ಪ್ಯಾಲೇಸ್, ಪೂಜಾ ಟೆಂಟ್ ಹೌಸ್, ದೇವರಾಜ್ ಅರಸ್   ಹಾಗೂ ಕಾಳಿಕಾದೇವಿ ರಸ್ತೆಯ ಮೈಸೂರು ಟಾರ್ಪಾಲಿನ್ಸ್,ಎಸ್,ಎಂಪಿ ಡೆವಲಪರ್ಸ್ ಹಾಗೂ ಆನ್ ಲೈನ್  ವೆಬ್ ಸೈಟ್  http://www.samaratv.in/uniorcrazybigboss ನಲ್ಲಿಯೂ ಲಭ್ಯವಿವೆ ಎಂದು ತಿಳಿಸಿದರು.

ಮೈಸೂರು ಕೇಬಲ್ ಆಪರೇಟರ್ಸ್ ಸಂಘದ ಪ್ರೊ.ಪ್ರಕಾಶ್, ಯೂನಿವರ್ಸಲ್ ಅಕ್ಯಾಡೆಮಿ ಎಸ್.ಸಿ.ನಾಗೇಶ್,  ಸಮರ ಟಿವಿ ಮುಖ್ಯಸ್ಥ ಶ್ರೀನಿಧಿ, ಸಮರ ಟಿವಿ ಅಧ್ಯಕ್ಷ ಸಿ.ವಿ.ಪಾರ್ಥಸಾರಥಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. (ಕೆ.ಎಂ.ಆರ್)

Leave a Reply

comments

Related Articles

error: