ಮನರಂಜನೆಮೈಸೂರು

ಫಿಲ್ಟರ್ ಕಾಫಿ ಹಾಗೂ ಚದುರಂಗ ಕಿರುಚಿತ್ರ ಪ್ರದರ್ಶನ

ಆರ್ಟಿಸ್ಟಿಕ್ ಲ್ಯಾಡ್ಜ್ ನಡಿ ನಿರ್ಮಿಸಲಾದ ವಿಭಿನ್ನ ಕಥಾಹಂದರವಿರುವ ಫಿಲ್ಟರ್ ಕಾಫಿ ಹಾಗೂ ಚದುರಂಗ ಕಿರು ಸಿನಿಮಾ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಫೀಲ್ಟರ್ ಕಾಫಿ ನಿರ್ದೇಶಕ ಪ್ರಮೋದ್ ನಾಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ ಫಿಲ್ಟರ್ ಕಾಫಿ ಹಾಗೂ ಚದುರಂಗ ಸಿನಿಮಾ ಪ್ರದರ್ಶನವನ್ನು ಏ.29ರ ಶನಿವಾರ ಸಂಜೆ 5ಕ್ಕೆ ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ ಆಯೋಜಿಸಲಾಗಿದೆ.

ಯುವ ಸಮೂಹಗಳಲ್ಲಿ ಅತಿ ನಿರೀಕ್ಷೆ ಹಾಗೂ ಕ್ಷುಲಕ ಕಾರಣದಿಂದ ಮೂಡುವ ಕಲಹ, ಮನಸ್ತಾಪ ವಿಷಯಾಧಾರಿತವಾಗಿರುವ ಫಿಲ್ಟರ್ ಕಾಫಿ ಚಿತ್ರ ಸುಮಾರು 13 ಕಾಲಾವಧಿಯಾಗಿದೆ ಎಂದು ತಿಳಿಸಿದರು.

ಚದುರಂಗ ಸಿನಿಮಾ ನಿರ್ದೇಶಕ ಅರ್ಜುನ್ ಯಾದವ್ ಮಾತನಾಡಿ ಹಣದಿಂದಾಗುವ ದುಷ್ಪರಿಣಾಮವನ್ನು ಸುಮಾರು 30 ನಿಮಿಷಗಳಲ್ಲಿ  ಚದುರಂಗ ಚಿತ್ರದಲ್ಲಿ ಸ್ಪಷ್ಟವಾಗಿ ತೆರೆ ಮೇಲೆ ಮೂಡಿ ಬಂದಿದೆ, ಅತ್ಯುತ್ಕೃಷ್ಟ ತಂತ್ರಜ್ಞಾನವೂ ಚಿತ್ರದ ಶ್ರೀಮಂತಿಕೆಯನ್ನು ಹೆಚ್ಚಿಸಿದೆ. ಯೂ ಟ್ಯೂಬ್ ನಲ್ಲಿ ಚಿತ್ರದ ಟ್ರೇಲರ್ ಮತ್ತು ಟೀಸರ್ ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ, ಸುಮಾರು 1.5 ಲಕ್ಷ ರೂಪಾಯಿಗಳಲ್ಲಿ ಸಿನಿಮಾ ನಿರ್ಮಾಣವಾಗಿದ್ದು  ಇಂಜಿನಿಯರ್ ಗಳು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಚಿತ್ರ ತಯಾರಿಯಲ್ಲಿ ತೊಡಗಿಸಿಕೊಂಡಿದ್ದು ವಾರಾಂತ್ಯದ ದಿನಗಳಲ್ಲಿ ಸಿನಿಮಾ ಚಿತ್ರೀಕರಣ ನಡೆಸಲಾಗುತ್ತಿತ್ತು ಎಂದು ತಿಳಿಸಿದರು.

ನಿರ್ಮಾಪಕಿ ಪರಿಣಿತ. ನಾಯಕ ನಟ ಅಶ್ವಿನ್ ಯಾದವ್, ರಂಗಕರ್ಮಿ ನಾಗಾರ್ಜುನ್ ಹಾಗೂ ಚದುರಂಗದ ಸಿನಿಮಾದ ನಾಯಕ ನಟ ಕಿರಣ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. (ಕೆ.ಎಂ.ಆರ್)

Leave a Reply

comments

Related Articles

error: