ಕರ್ನಾಟಕಪ್ರಮುಖ ಸುದ್ದಿ

ಗುಂಡ್ಲುಪೇಟೆ: ವಿದ್ಯುತ್ ಬೇಲಿಗೆ ಸಿಲುಕಿ ಹೆಣ್ಣಾನೆ ಸಾವು

ಗುಂಡ್ಲುಪೇಟೆ,(ಚಾಮರಾಜನಗರ),ಜು.15- ಅಕ್ರಮ ವಿದ್ಯುತ್ ಬೇಲಿಗೆ ಸಿಲುಕಿ ಹೆಣ್ಣಾನೆಯೊಂದು ಮೃತ ಪಟ್ಟಿರುವ ಘಟನೆ ತಾಲೂಕಿನ ಆಲತ್ತೂರು ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಬಂಡೀಪುರ ಹುಲಿ ಯೋಜನೆಯ ಓಂಕಾರ್ ವಲಯದ ಕಾಡಂಚಿನ ಆಲತ್ತೂರು ಗ್ರಾಮದ ಜಗನ್ನಾಥ್ ಎಂಬುವರ ಜಮೀನಿನಲ್ಲಿ ಬೆಳೆದಿದ್ದ ನೆಲಗಡಲೆ ರಕ್ಷಣೆಗೆ ಅಕ್ರಮವಾಗಿ ವಿದ್ಯುತ್ ಬೇಲಿ ಬಳಕೆ ಮಾಡಿದ್ದರು. ಬುಧವಾರ ರಾತ್ರಿ ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಆನೆಯು ಜಗನ್ನಾಥ್ ರವರ ಜಮೀನಿಗೆ ನುಗ್ಗಲು ಪ್ರಯತ್ನಿಸಿದಾಗ ವಿದ್ಯುತ್ ಪ್ರವಹದಿಂದ ಸಾವನ್ನಪ್ಪಿದೆ. ಆನೆಗೆ ಸುಮಾರು 40 ವರ್ಷ ವಯಸ್ಸಾಗಿತ್ತು ಎಂದು ಅಂದಾಜಿಸಲಾಗಿದೆ.

ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ವರ್ಗದವರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. (ಎಂ.ಎನ್)

Leave a Reply

comments

Related Articles

error: