ದೇಶಪ್ರಮುಖ ಸುದ್ದಿ

ಕೋವಿಡ್‌ ಎದುರಿಸಲು ಉತ್ತರ ಪ್ರದೇಶ ಸರ್ಕಾರ ಕೈಗೊಂಡ ಪ್ರಯತ್ನ ಶ್ಲಾಘನೀಯ: ಪ್ರಧಾನಿ ಮೋದಿ

ವಾರಾಣಸಿ,ಜು.15-`ಕೋವಿಡ್‌-19′ ಸಾಂಕ್ರಾಮಿಕದ ಬಿಕ್ಕಟ್ಟನ್ನು ಎದುರಿಸಲು ಉತ್ತರ ಪ್ರದೇಶ ಸರ್ಕಾರ ಕೈಗೊಂಡ ಪ್ರಯತ್ನಗಳು ಶ್ಲಾಘನೀಯ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು.

ತಮ್ಮ ಲೋಕಸಭಾ ಕ್ಷೇತ್ರವಾದ ವಾರಾಣಸಿಯಲ್ಲಿ ಗುರುವಾರ 1,500 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಉತ್ತರ ಪ್ರದೇಶ ಸರ್ಕಾರ ಕೋವಿಡ್‌-19 ಎರಡನೇ ಅಲೆಯನ್ನು ನಿಯಂತ್ರಿಸಿ, ಸೋಂಕು ಹರಡದಂತೆ ಕೈಗೊಂಡ ಕ್ರಮಗಳು ಅಭೂತಪೂರ್ವವಾಗಿವೆ ಎಂದು ಬಣ್ಣಿಸಿದರು.

ಈ ಹಿಂದೆ ಆರೋಗ್ಯ ಕ್ಷೇತ್ರದಲ್ಲಿ ಸೌಲಭ್ಯಗಳ ಲಭ್ಯತೆ ಕಡಿಮೆಯಾಗಿದ್ದು ಮತ್ತು ಇಚ್ಛಾಶಕ್ತಿಯ ಕೊರತೆಯ ಕಾರಣದಿಂದಾಗಿ ಸಣ್ಣ ಪುಟ್ಟ ಸಮಸ್ಯೆಗಳು ಬೃಹದಾಕಾರವಾಗಿ ಕಾಣುತ್ತಿದ್ದವು ಎಂದು ಅವರು ನೆನಪಿಸಿದರು.

ಇದಕ್ಕೂ ಮುನ್ನ ವಾರಾಣಸಿಯಲ್ಲಿ ಪ್ರಧಾನಿಯವರು 744 ಕೋಟಿ ರೂ. ಮೊತ್ತದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು. 839 ಕೋಟಿ ರೂ. ಮೊತ್ತ ಯೋಜನೆಗಳಿಗೆ ಶಂಕುಸ್ಥಾನೆ ನೆರವೇರಿಸಿದರು. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: