ಮೈಸೂರು

ಸಂಗೀತ ಮತ್ತು ತಂತ್ರಜ್ಞಾನವನ್ನು ಜೊತೆಯಲ್ಲೇ ಕೊಂಡೊಯ್ಯಬೇಕಿದೆ : ಪ್ರೊ.ನಿರಂಜನ ವಾನಳ್ಳಿ

ಸಂಗೀತ ಹಾಗೂ ತಂತ್ರಜ್ಞಾನ ಜೀವನದ ಅವಿಭಾಜ್ಯ ಅಂಗವಾಗಿದ್ದು ಎರಡನ್ನೂ ಒಟ್ಟಿಗೆ ಕೊಂಡೊಯ್ಯಬೇಕಿದೆ ಎಂದು ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಕುಲಸಚಿವ ಪ್ರೊ. ನಿರಂಜನ ವಾನಳ್ಳಿ ಅಭಿಪ್ರಾಯಪಟ್ಟರು.
ಗುರುವಾರ ಮೈಸೂರಿನ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಮೈಸೂರು ವಿವಿ ದೃಷ್ಟಿ ಕೇಂದ್ರದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸಹಾಯಕ ತಂತ್ರಜ್ಞಾನ ಮತ್ತು ಸಂಗೀತ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಧನೆಗೆ ಅಂಗವೈಕಲ್ಯ ಅಡ್ಡಿಯಲ್ಲ. ಎಲ್ಲವೂ ಸರಿಯಿರುವವರು ಮಾಡದ ಸಾಧನೆಯನ್ನು ವಿಶೇಷ ಚೇತನರು ಮಾಡಿ ತೋರಿಸಿದ್ದಾರೆ. ಅವರಲ್ಲಿನ ಆತ್ಮಸ್ಥೈರ್ಯ ಬೇರೆಯವರಲ್ಲೇ ಇರುವುದಿಲ್ಲ. ಆಧುನಿಕ ಯುಗದಲ್ಲಿ ತಂತ್ರಜ್ಞಾನದ ಪಾತ್ರ ಪ್ರತಿಯೊಂದರಲ್ಲೂ ಇದ್ದು, ಅವುಗಳನ್ನು ಬಳಸಿಕೊಳ್ಳುವ ವಿಧಾನಗಳನ್ನು ತಿಳಿದುಕೊಳ್ಳಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ವಯೋಲಿನ್ ವಾದಕ ವಿದ್ವಾಂನ್ ಡಾ.ಮೈಸೂರು ಎಂ.ಮಂಜುನಾಥ್, ದೃಷ್ಟಿ ಕೇಂದ್ರದ ಸಂಯೋಜಕ ಪ್ರೊ.ಎನ್.ಉಷಾರಾಣಿ, ಮೈಸೂರು ವಿವಿ ಫೈನ್ ಆರ್ಟ್ಸ್ ವಿಭಾಗದ ಡಾ.ಕೆ.ಟಿ.ಉದಯ್‍ಕಿರಣ್, ಸಂಗೀತ ಪ್ರಾಧ್ಯಾಪಕ ವಿದ್ವಾನ್ ಎಸ್.ಆರ್.ಮಾರುತಿ ಪ್ರಸಾದ್ ಕೇಂದ್ರದ ಸಂಯೋಜಕ ಡಾ.ಕೃಷ್ಣ ಹೊಂಬಾಳ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: