ಮೈಸೂರು

ಎಸ್ ಎಸ್ ಎಲ್ ಸಿ ಪರೀಕ್ಷೆ ಹಿನ್ನೆಲೆ : ಶಾಸಕ ರಾಮದಾಸ್ ರಿಂದ ಫೋನ್ ಇನ್ ಕಾರ್ಯಕ್ರಮ

ಮೈಸೂರು,ಜು.15:- ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ದಕ್ಷಿಣ ವಲಯ ಮೈಸೂರು, ಇವರ ವತಿಯಿಂದ ಈ ದಿನ ವಲಯ ವ್ಯಾಪ್ತಿಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಂದ ಶಾಸಕರಾದ ಎಸ್ . ಎ . ರಾಮ್‌ ದಾಸ್ ಅವರೊಂದಿಗೆ ನೇರ ಫೋನ್ ಇನ್ ಕಾರ್ಯಕ್ರಮವನ್ನು ಗೋಪಾಲಸ್ವಾಮಿ ಶಿಶುವಿಹಾರ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿತ್ತು.

ಈ ಫೋನ್ ಇನ್ ಕಾರ್ಯಕ್ರಮದಲ್ಲಿ   ಶಾಸಕರು ಪ್ರಾಸ್ತಾವಿಕವಾಗಿ ಮಾತನಾಡಿ ಈ ಬಾರಿ ವಿಭಿನ್ನವಾಗಿ ನಡೆಯುತ್ತಿರುವ ಪರೀಕ್ಷೆಯ ರೂಪರೇಷಗಳು ಕೈಗೊಳ್ಳಬೇಕಾದ ಅಗತ್ಯ ಮುಂಜಾಗ್ರತಾ ಕ್ರಮಗಳು , ಧೈರ್ಯವಾಗಿ ಪರೀಕ್ಷೆಯನ್ನು ಎದುರಿಸುವ ಬಗ್ಗೆ ಮಕ್ಕಳಿಗೆ ಪ್ರೇರಣಾತ್ಮಕ ನುಡಿಗಳನ್ನು ನುಡಿದರು.

ಸುಮಾರು 18 ವಿದ್ಯಾರ್ಥಿಗಳು ಪರೀಕ್ಷೆಯ ಬಗೆಗೆ ತಮ್ಮಲ್ಲಿದ್ದ ಸಂದೇಹಗಳ ಬಗ್ಗೆ ಶಾಸಕರೊಂದಿಗೆ ಸಂವಾದಿಸಿ ಪರಿಹರಿಸಿಕೊಂಡರು , ಮರಿಮಲ್ಲಪ್ಪ ಪ್ರೌಢಶಾಲೆಯ ಸೂರ್ಯನಾರಾಯಣ , ಗೋಪಾಲಸ್ವಾಮಿ ಶಿಶುವಿಹಾರ ಪ್ರೌಢಶಾಲೆಯ ಷಣ್ಮಗ  ಎಂಬ ವಿದ್ಯಾರ್ಥಿಗಳು ಪ್ರಶ್ನೆಯನ್ನು ಕೇಳಿ ಉತ್ತರ ಪಡೆದರು . ಶಾಸಕರು ಪರೀಕ್ಷಾ ಕೇಂದ್ರದಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳು ಹಾಗೂ SOP ಪಾಲನೆ ಬಗ್ಗೆ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸುವ ಬಗ್ಗೆ ಪ್ರೇರಣಾತ್ಮಕ ನುಡಿಗಳನ್ನು ನುಡಿದರು.

ವಿದ್ಯಾರ್ಥಿಗಳ ಹಲವು ಕರೆಗಳನ್ನ ಸ್ವೀಕಾರ ಮಾಡಿದ ಮಾನ್ಯ ಶಾಸಕರು ಹಲವಾರು ಸಲಹೆಗಳನ್ನು ವಿದ್ಯಾರ್ಥಿಗಳಿಗೆ ನೀಡಿದರು.  ಪರೀಕ್ಷೆಗೆ ಕೆಲವೇ ದಿನಗಳಿವೆ ಈಗ ಹೆಚ್ಚಿನದಾಗಿ ಓದುವ ಬದಲು ಆ  ವಿಷಯಕ್ಕೆ ಸಂಬಂಧಪಟ್ಟಂತೆ ನಿಮಗೇನು ಗೊತ್ತಿದೆ ಎಂದು ಬರೆಯಬೇಕು ಆಗ ಪರೀಕ್ಷೆಗೆ ಬಹಳ ಅನುಕೂಲವಾಗುತ್ತದೆ. ಪರೀಕ್ಷೆಯ ಭಯ ಮಕ್ಕಳಲ್ಲಿ ಇರುವುದು ಸಹಜ ಆದರೆ ನಾವು ಪರೀಕ್ಷೆಯ ಅಂಕಗಳನ್ನ ಬೇರೆಯವರಿಗೆ ಹೋಲಿಸಕೂಡದು ನಮ್ಮ ಅಂಕಗಳನ್ನು ನಾವೇ ನಮ್ಮ ಹಿಂದಿನ ಅಂಕಕ್ಕೆ ಹೋಲಿಸಿಕೊಂಡು ಎಷ್ಟು ಬೆಳವಣಿಗೆ ಆಗಿದೆ ಎಂದು ನೋಡಿಕೊಳ್ಳಬೇಕು ಆಗ ಮಾತ್ರ ವಿಕಸನವಾಗಲು ಸಾಧ್ಯ. ನಿಮಗೆ ನೀವೇ ಸ್ಪರ್ಧೆ ಮಾಡಿಕೊಳ್ಳಬೇಕು. ಪರೀಕ್ಷೆಯನ್ನು ಈ ಬಾರಿ ಸ್ವಲ್ಪ ಬೇರೆ ರೀತಿ ಏರ್ಪಡಿಸಲಾಗಿದೆ. ಪರೀಕ್ಷೆಯ ಸಂದರ್ಭದಲ್ಲಿ ಸ್ವಲ್ಪ ಆಹಾರದ ಬಗ್ಗೆ ಗಮನ ಹರಿಸಿಕೊಳ್ಳಬೇಕು ಹೆಚ್ಚಿನ ಎಣ್ಣೆಯ ಪದಾರ್ಥ, ಶೀತಲ ಪದಾರ್ಥಗಳನ್ನು ತೆಗೆದುಕೊಳ್ಳದೇ ಹಿತಮಿತವಾದ ಆಹಾರವನ್ನು ಸೇವಿಸಬೇಕು ಜೊತೆಗೆ ಮುಖ್ಯವಾಗಿ ಚೆನ್ನಾಗಿ ನಿದ್ದೆ ಮಾಡಬೇಕು. ಸೂರ್ಯೋದಯಕ್ಕಿಂತ ಮುಂಚಿತವಾಗಿ ಏಳಲು ಅಭ್ಯಾಸ ಮಾಡಿಕೊಳ್ಳಬೇಕು ಆಗ ಪೂರ್ತಿ ದಿನ ಲವಲವಿಕೆಯಿಂದ ಇರಲು ಸಾಧ್ಯ. ಇನ್ನು ಕೆಲವೇ ದಿನಗಳಿವೆ ನಿಮ್ಮ ಪರೀಕ್ಷೆಗೆ ಹಾಗಾಗಿ ಯಾರನ್ನೋ ಮೆಚ್ಚಿಸಲು, ಅಂಕಗಳನ್ನು ತೆಗೆಯಲು ಮಾತ್ರ ಓದಬೇಡಿ ಜ್ಞಾನಾರ್ಜನೆ ಮಾಡಲು ಓದಿ ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ಪರೀಕ್ಷೆಯನ್ನು ಹಬ್ಬದ ರೀತಿ ಆಚರಣೆ ಮಾಡಿ ಎಂದು ವಿದ್ಯಾರ್ಥಿಗಳಿಗೆ ಹೇಳಿದ್ದಾರೆ, ಅಂದರೆ ಪರೀಕ್ಷೆ ಎಂದು ಹೆದರದೇ ಇರಿ ಎಂದರ್ಥ. ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಸರ್ಕಾರ ಪರೀಕ್ಷೆ ನಡೆಸುತ್ತಿದೆ, ಕೋವಿಡ್ ಬಗ್ಗೆ ಹೆದರದೇ ಪರೀಕ್ಷೆಗೆ ಬನ್ನಿ. ಮೈಸೂರು ಶೈಕ್ಷಣಿಕವಾಗಿ ಎತ್ತರಕ್ಕೆ ಏರಲಿ, ಅದಾಗಬೇಕಾದರೆ ನಿಮ್ಮೆಲ್ಲರ ಪ್ರಯತ್ನ ಮುಖ್ಯ. ಎಲ್ಲರಿಗೂ ಶುಭವಾಗಲಿ ಎಂದರು.

ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್ ರಾಮಾರಾಧ್ಯ, ಬಿ.ಏರ್.ಸಿ ನಾಗೇಶ್, ಶಿಕ್ಷಣ ಸಂಯೋಜಕರು ಮನೋಹರ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶ್ರೀಕಂಠ ಶಾಸ್ತ್ರಿ, ಸಿ.ಆರ್.ಪಿ ರಾಜು,ಗೋಪಾಲಸ್ವಾಮಿ ಶಾಲೆಯ ಬಾನುಲಿ ಕೇಂದ್ರದ ನಿರ್ದೇಶಕರಾದ ಪಾಂಡುರಂಗ  ಹಾಜರಿದ್ದರು. (ಕೆ.ಎಸ್. ಎಸ್.ಎಚ್)

Leave a Reply

comments

Related Articles

error: