ದೇಶಪ್ರಮುಖ ಸುದ್ದಿ

ಮುಂಬೈನಲ್ಲಿ ಧಾರಾಕಾರ ಮಳೆ: ಹಲವು ಪ್ರದೇಶಗಳು ಜಲಾವೃತ

ಮುಂಬೈ,ಜು.16-ಮುಂಬೈನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಹಲವು ಪ್ರದೇಶಗಳು ಜಲಾವೃತವಾಗಿವೆ. ಇದರಿಂದ ಸಂಚಾರಕ್ಕೆ ಅಡ್ಡಿಯಾಗಿದೆ.

ಹಲವು ಪ್ರದೇಶಗಳಲ್ಲಿ ನೀರು ತುಂಬಿ ಸಂಚಾರಕ್ಕೆ ಅಡಚಣೆಯುಂಟಾಗಿರುವುದರಿಂದ ಸಂಚಾರ ಮಾರ್ಗಗಳನ್ನು ಬದಲಾಯಿಸಲಾಗಿದೆ.

ಸತತ ಧಾರಾಕಾರ ಮಳೆಯಿಂದ ರೈಲು ಹಳಿಗಳ ಮೇಲೆ ನೀರು ತುಂಬಿದ್ದು, ಕುರ್ಲ-ವಿದ್ಯಾವಿಹಾರ್ ರೈಲು ಮಾರ್ಗದಲ್ಲಿ ಸಂಚಾರ 20ರಿಂದ 25 ನಿಮಿಷ ತಡವಾಗಿದೆ. ಕೇಂದ್ರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ಕುರ್ಲ-ವಿದ್ಯಾವಿಹಾರ್ ರೈಲು ಮಾರ್ಗದ ಸಂಚಾರವನ್ನು ಬದಲಾವಣೆ ಮಾಡಲಾಗಿದೆ. ಹಾರ್ಬರ್ ಲೈನ್ ಕೂಡ ಅರ್ಧ ಗಂಟೆ ತಡವಾಗಿದೆ. ಟ್ರಾನ್ಸ್-ಹರ್ಬರ್ ಲೈನ್ ಸಂಚಾರ ಸುಗಮವಾಗಿ ಸಾಗುತ್ತಿದೆ.

ಚುನಭಟ್ಟಿ ನಿಲ್ದಾಣದ ಬಳಿ ಭಾರಿ ಮಳೆ ಮತ್ತು ನೀರು ಹರಿಯುವುದರಿಂದ ರೈಲ್ವೆ ಹಳಿಗಳು ಜಲಾವೃತಗೊಳ್ಳಲು ಪ್ರಾರಂಭಿಸಿವೆ. ಈ ಮಧ್ಯೆ, ಮುಂಬೈನ ಪ್ರಾದೇಶಿಕ ಹವಾಮಾನ ಕೇಂದ್ರವು ನಗರ ಮತ್ತು ಉಪನಗರಗಳಲ್ಲಿ ಹಗುರದಿಂದ ಕೂಡದ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ. (ಏಜೆನ್ಸೀಸ್, ಎಂ.ಎನ್)

Leave a Reply

comments

Related Articles

error: