ಕರ್ನಾಟಕಪ್ರಮುಖ ಸುದ್ದಿ

ನಟ ದರ್ಶನ್ ತೇಜೋವಧೆಗೆ ಪ್ರಯತ್ನ: ಸಚಿವ ಬಿ.ಸಿ. ಪಾಟೀಲ್

ಬೆಂಗಳೂರು,ಜು.16-ನಟ ದರ್ಶನ್ ಅವರ ತೇಜೋವಧೆ ಮಾಡಲು ಪ್ರಯತ್ನ ನಡೆದಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಟ ದರ್ಶನ್ ಒಳ್ಳೆಯ ವ್ಯಕ್ತಿ. ಬಹಳ ಕಷ್ಟದಿಂದ ಬೆಳೆದು ಈ ಮಟ್ಟಕ್ಕೆ ಬಂದಿದ್ದಾರೆ. ಅವರ ತೇಜೋವಧೆ ಮಾಡಲು ಪ್ರಯತ್ನ ನಡೆದಿದೆ. ದರ್ಶನ್​ ಹೊಸಬರನ್ನು ಚಿತ್ರರಂಗದಲ್ಲಿ ಪ್ರೋತ್ಸಾಹಿಸುತ್ತಾರೆ. ಯಾವುದೇ ಕಾರಣಕ್ಕೂ ದರ್ಶನ್​ರನ್ನು ಕೃಷಿ ಇಲಾಖೆ ರಾಯಭಾರಿ ಸ್ಥಾನದಿಂದ ಕೈ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪೋಲೀಸ್ ಇಲಾಖೆ ಯಾರ ಕೈನಲ್ಲೂ ಇಲ್ಲ. ಅವರ ಕೆಲಸ ಅವರು ಮಾಡುತ್ತಾರೆ. ರೆಕ್ಕೆಪುಕ್ಕ ಹುಟ್ಟಿಕೊಳ್ಳುತ್ತವೆ ಎಂಬ ಮಾತಿಗೆ ತಲೆ ಕಡೆಯುವೆ ಅಂದಿದ್ದಾರೆ ಅಷ್ಟೆ. ಅದು ಯಾರನ್ನೂ ಗಮನದಲ್ಲಿಟ್ಟುಕೊಂಡು ಹೇಳಿದ ಮಾತಲ್ಲ ಎಂದು ದರ್ಶನ್ ಹೇಳಿಕೆಯನ್ನು ಸಮರ್ಥಿಸಿಕೊಂಡರು. (ಎಂ.ಎನ್)

 

Leave a Reply

comments

Related Articles

error: