ಮೈಸೂರು

ರಸ್ತೆ ಅಭಿವೃದ್ಧಿ, ರಸ್ತೆ ಅಗಲೀಕರಣ ಪರಿಶೀಲನೆ ನಡೆಸಿದ ಸಂಸದ ಪ್ರತಾಪ್ ಸಿಂಹ

ಮೈಸೂರು,ಜು.17:- ಸಂಸದ ಪ್ರತಾಪ್ ಸಿಂಹ ಅವರು ನಿನ್ನೆ ರಾಷ್ಟ್ರೀಯ ಹೆದ್ದಾರಿ-275 ವ್ಯಾಪ್ತಿಗೆ ಬರುವ  ಸ್ಥಳಗಳಲ್ಲಿ ರಸ್ತೆ ಅಭಿವೃದ್ಧಿ, ರಸ್ತೆ ಅಗಲೀಕರಣ ಸರ್ಕಲ್ ನಿರ್ಮಾಣ ಹಾಗೂ ಗ್ರೇಡ್ ಸಪರೇಟರ್   ನಿರ್ಮಾಣದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

ಮೈಸೂರಿನ ಬೆಳವಾಡಿ ಬಳಿ ಇರುವ ಲಿಂಗದೇವರ ಕೊಪ್ಪಲು ಗೇಟ್ ( ಪೊಲೀಸ್ ಚೌಕಿ) ಹತ್ತಿರ  ರೌಂಡ್ ಅಬೌಟ್ ಸರ್ಕಲ್  ನಿರ್ಮಿಸಲು, ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಸ್ಥಳಕ್ಕೆ  ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೈಸೂರಿನ ಹೂಟಗಳ್ಳಿ ಸರ್ಕಲ್ ಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಹೂಟಗಳ್ಳಿ ಸರ್ಕಲ್ ನಲ್ಲಿ ಗ್ರೇಡ್ ಸಪರೇಟರ್ ನಿರ್ಮಾಣದ ಡಿಪಿಆರ್ ಮಾಡಲು ಸ್ಥಳ ಪರೀಕ್ಷೆ ಮತ್ತು ಸೂಚನೆ ನೀಡಿದರು.

ಮೈಸೂರು- ಹುಣಸೂರು ರಸ್ತೆ ಗ್ರಾಂಡ್ ಮೌರ್ಯ ಹೋಟೆಲ್ ಬಳಿ ರಸ್ತೆ ಅಗಲೀಕರಣಕ್ಕೆ ಸಂಬಂಧ ಪಟ್ಟಂತೆ  ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: