ಮೈಸೂರು

ಜು.19:ಲಾಕ್ ಡೌನ್ ಸಂದರ್ಭ ಹೃದಯ ಶ್ರೀಮಂತಿಕೆ ಮೆರೆದು ಸಹಾಯ ಹಸ್ತ ನೀಡಿದ ಸಮಾಜ ಸೇವಕರಿಗೆ ಅಭಿನಂದನಾ ಕಾರ್ಯಕ್ರಮ

ಮೈಸೂರು,ಜು.17:- ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಸಮಾಜಕ್ಕೆ ನೆರವಾದ ಹೃದಯ ಶ್ರೀಮಂತಿಕೆಯ ಸಮಾಜ ಸೇವಕರಿಗೆ ಸುವರ್ಣ ಬೆಳಕು ಫೌಂಡೇಷನ್ ನಿಂದ ಅಭಿನಂದನಾ ಜು.19ರಂದು ಸಂಜೆ 5ಗಂಟೆಗೆ ಕೃಷ್ಣಮುರ್ತಿಪುರಂ ರಾಮ ಮಂದಿರ ಹಿಂಭಾಗದಲ್ಲಿರುವ ನಮನ ಕಲಾಮಂಟಪದಲ್ಲಿ  ಅಭಿನಂದಿಸುವ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಕೋವಿಡ್ ಸಂದರ್ಭದಲ್ಲಿ ಮೈಸೂರಿನ ಬಡಜನರಿಗೆ ಹಾಗೂ ಸಾರ್ವಜನಿಕರಿಗೆ, ಅಂಗವಿಕಲರಿಗೆ ಆಹಾರ ವಿತರಣೆ ಮತ್ತು ಅವಶ್ಯಕ ವಸ್ತುಗಳ ದಿನಸಿ ಕಿಟ್ ವಿತರಣೆ ಹಾಗೂ ಮೈಸೂರು ಮೃಗಾಲಯದ ಪ್ರಾಣಿ ದತ್ತು ತೆಗೆದುಕೊಂಡಿರುವ ಸಾರ್ಥಕತೆ ಮೆರೆದು ಸಮಾಜ ಸೇವೆ ಮಾಡಿದವರಿಗೆ ಕೋವಿಡ್ ನೆರವು ಅಭಿನಂದನಾ ಪತ್ರವನ್ನು  ಗೌರವಿಸಿ ಅಭಿನಂದಿಸಲಾಗುತ್ತಿದೆ.

ಕೋವಿಡ್ ಎರಡನೇ ಅಲೆಯಲ್ಲಿ ರಾಜ್ಯಸರ್ಕಾರ ಲಾಕ್ಡೌನ್ ನಿಯಮವನ್ನು ಹೇರಿದ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಮೈಸೂರಿನ ದೀನದಲಿತರಿಗೆ,ಆಟೋಚಾಲಕರಿಗೆ,ಅಂಗವಿಕಲರಿಗೆ ಹಾಗೂ ಸಾರ್ವಜನಿಕರಿಗೆ ಕೋವಿಡ್ ನೆರವು ನೀಡಿದವರಿಗೆ ಅಭಿನಂದನಾ ಪತ್ರವನ್ನು ನೀಡಲಾಗುತ್ತಿದ್ದು ಮುಖ್ಯ ಅತಿಥಿಗಳಾಗಿ ಮಧುಮೇಹ ತಜ್ಞರಾದ ಡಾ. ರೇಣುಕಾ ಪ್ರಸಾದ್  , ಬಿಜೆಪಿ ನಗರಾಧ್ಯಕ್ಷ ಟಿ.ಎಸ್.   ಹಿರಿಯ ಸಮಾಜ ಸೇವಕ ಡಾ.ರಘುರಾಂ ವಾಜಪೇಯಿ ಅವರು ಆಗಮಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಸಮಾಜ ಸೇವಕ ಡಾ.ನಟರಾಜ್ ಜೋಯಿಸ್,   ಎಡಿನ್ ಸಂಸ್ಥೆಯ ಮುಖ್ಯಸ್ಥರು,   ವಿ.ಕೆ.ಎಸ್ ಪೌಂಢೇಶನ್ ಮುಖ್ಯಸ್ಥರು, ಫೈಟರ್ ಸ್ಪೋರ್ಟ್ಸ್ ವೇರ್  ಮಾಲೀಕರಾದ ಮಂಜುನಾಥ್,   ಹೊಯ್ಸಳ ಕರ್ನಾಟಕ ಸಂಘದ  ರಂಗನಾಥ್ ಎಸ್,  ಅಪೂರ್ವ ಶಿವಣ್ಣ  ಇವರನ್ನು ಅಭಿನಂದಿಸಲಾಗುತ್ತಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: