ಮೈಸೂರು

ಪ್ರವಾಸೋದ್ಯಮ ಸಚಿವರ ಜಿಲ್ಲಾ ಪ್ರವಾಸ

ಮೈಸೂರು,ಜು. 17 :- ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಸಿ.ಪಿ. ಯೋಗೇಶ್ವರ ಅವರು ಜುಲೈ 19ರಂದು ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಅಂದು ಮಧ್ಯಾಹ್ನ 2.45 ಗಂಟೆಗೆ ಸೋಮನಾಥಪುರದ ಚೆನ್ನಕೇಶವ ದೇವಾಲಯಕ್ಕೆ ಭೇಟಿ ನೀಡುವರು.
ಮಧ್ಯಾಹ್ನ 3.30ಕ್ಕೆ ಮುಡುಕುತೊರೆಯಲ್ಲಿರುವ ಗಂಗರ ಅರಸು ಶ್ರೀಪುರುಷನ ಸಮಾಧಿ ವೀಕ್ಷಣೆ ಮಾಡುವರು. ತಲಕಾಡಿನಲ್ಲಿರುವ ಕೀರ್ತಿನಾರಾಯಣ ದೇವಸ್ಥಾನದಲ್ಲಿ ಸಂಜೆ 5 ಗಂಟೆಗೆ ಪತ್ರಿಕಾಗೋಷ್ಠಿಯನ್ನು ನಡೆಸುವರು. ಇದಾದ ನಂತರ ಕೇಂದ್ರ ಸ್ಥಾನ ಬೆಂಗಳೂರಿಗೆ ತೆರಳುವರು.

Leave a Reply

comments

Related Articles

error: