ಮೈಸೂರು

ನಾಳೆ ಡಾ. ಜೆ.ಎನ್. ಭಟ್‍ ಅವರಿಂದ ಸ್ವಾಸ್ಥ್ಯ ಜೀವನದ ಕುರಿತು ಉಪನ್ಯಾಸ

ಮೈಸೂರು,ಜು.18:-ಜೆ ಎಸ್‍ ಎಸ್ ಮಹಾವಿದ್ಯಾಪೀಠ ಮತ್ತು ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯ ಆಶ್ರಯದಲ್ಲಿ ಪ್ರತಿ ಸೋಮವಾರ ಆನ್‍ಲೈನ್ (ವರ್ಚುವಲ್) ಮೂಲಕ ಜ್ಞಾನ ವಾರಿಧಿ ಸಾಪ್ತಾಹಿಕ ಉಪನ್ಯಾಸ ಮಾಲೆಯನ್ನು ನಡೆಸಿಕೊಂಡು ಬರಲಾಗುತ್ತಿದೆ.
ಜ್ಞಾನ ವಾರಿಧಿ-33 ಡಿಜಿಟಲ್ ಉಪನ್ಯಾಸ ಕಾರ್ಯಕ್ರಮವು ನಾಳೆ ಸಂಜೆ 6 ಗಂಟೆಗೆ ಪ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ಜರುಗಲಿದೆ. ಮಂಗಳೂರಿನ ಇಂಡಿಯನ್ ರೆಡ್‍ ಕ್ರಾಸ್ ಸೊಸೈಟಿಯಲ್ಲಿ ವೈದ್ಯಾಧಿಕಾರಿಗಳಾಗಿರುವ ಡಾ. ಜೆ.ಎನ್. ಭಟ್‍ ಅವರು “ಸ್ವಾಸ್ಥ್ಯ ಜೀವನ” ಎಂಬ ವಿಷಯ ಕುರಿತು ಆನ್‍ಲೈನ್‍ ನಲ್ಲಿ ಉಪನ್ಯಾಸ ನೀಡಲಿದ್ದಾರೆ. ಉಪನ್ಯಾಸದ ನಂತರ ಆನ್‍ ಲೈನ್‍ ನಲ್ಲಿ ಬರುವ ಪ್ರಶ್ನೆಗಳಲ್ಲಿ ಆಯ್ದವುಗಳಿಗೆ ಉತ್ತರಿಸಲಾಗುವುದು.
ಪ್ರತಿ ಸೋಮವಾರವೂ ನಡೆಯುವ ಈ ಉಪನ್ಯಾಸದಲ್ಲಿ ಧರ್ಮ, ಅಧ್ಯಾತ್ಮ, ಯೋಗ, ಕಲೆ, ಸಾಹಿತ್ಯ, ಸಂಸ್ಕೃತಿ, ಆರೋಗ್ಯ, ಜೀವನಶೈಲಿ, ವಿಜ್ಞಾನ, ತಂತ್ರಜ್ಞಾನ ಮುಂತಾದ ವಿಷಯಗಳು ಮತ್ತು ಪ್ರಚಲಿತ ವಿದ್ಯಮಾನಗಳನ್ನು ಕುರಿತು ದೇಶ ಮತ್ತು ವಿದೇಶದ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸಗಳನ್ನು ಆಯೋಜಿಸಲಾಗಿದೆ. ಆನ್‍ ಲೈನ್ ಮೂಲಕ ನಡೆಯುವ ಈ ಉಪನ್ಯಾಸ ಕಾರ್ಯಕ್ರಮವು ಸಾಕಷ್ಟು ಜನಪ್ರಿಯಗೊಂಡಿದೆ.
ಈ ಉಪನ್ಯಾಸವನ್ನು  Yotube http://Youtube.com/c/JSSMahavidyapeethaonline
https://www.facebook.com/JSSMVP, http://jssonline.org ಲಿಂಕ್‍ಗಳ ಮೂಲಕ ಕೇಳಬಹುದಾಗಿದೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮವನ್ನು ವೀಕ್ಷಿಸಿ ಸದುಪಯೋಗ ಪಡೆದಕೊಳ್ಳಬೇಕಾಗಿ ಕೋರಿದೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: