ಮೈಸೂರು

ಮೇದರ ಬ್ಲಾಕ್ ನಲ್ಲಿರುವ ಗುಡಿಸಲುಗಳ ತೆರವು ಕಾರ್ಯಾಚರಣೆ

ಮೈಸೂರು,ಜು.19:- ಮೈಸೂರಿನ ಮೇದರ ಬ್ಲಾಕ್ ನಲ್ಲಿರುವ ಗುಡಿಸಲುಗಳ ತೆರವು ಕಾರ್ಯಾಚರಣೆ ನಡೆಸಲಾಗಿದೆ.  ಸ್ಲಂ ಬೋರ್ಡ್ ವತಿಯಿಂದ   ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಲಾಗಿದೆ.

ಸ್ಥಳದಲ್ಲಿ ಸುಮಾರು 30ಕ್ಕೂ ಹೆಚ್ಚು ಗುಡಿಸಲುಗಳಿತ್ತು. ದಯಮಾಡಿ ಇದನ್ನು ತೆರವುಗೊಳಿಸಬೇಡಿ ಎಂದು ಕೆಲವು ಮಹಿಳೆಯರು ಗೋಗರೆದಿರುವುದು ಕಂಡು ಬಂದಿದೆ.ಆದರೆ ಸ್ಲಂ ಬೋರ್ಡ್ ವತಿಯಿಂದ ಈಗಾಗಲೇ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಧಿಕಾರಿಗಳ ಜೊತೆ ಸ್ಲಂ ನಿವಾಸಿಗಳು ಮಾತಿನ ಚಕಮಕಿ ನಡೆಸಿದ ಘಟನೆಯೂ ನಡೆದಿದೆ. ಗುಡಿಸಲಿನಲ್ಲಿರುವ ನಿವಾಸಿಗಳಿಗೆ ಸ್ಲಂ ಬೋರ್ಡ್ ನ ನರ್ಮ್ ಯೋಜನೆಯಡಿಯಲ್ಲಿ ಬೇರೆಡೆಗೆ ಮನೆಗಳನ್ನು ನೀಡಲಾಗಿದೆ. ಆದರೆ  ಆ ಜಾಗದಲ್ಲಿ ಸರಿಯಾದ ಮೂಲಭೂತ ಸೌಕರ್ಯವನ್ನು ಕಲ್ಪಿಸಿಲ್ಲ ಎಂಬ ಕಾರಣಕ್ಕಾಗಿ  ಇಲ್ಲೇ ಉಳಿದಿದ್ದರು.

ಸಾಮಾನು ಸಾಗಿಸಲು ಸಮಯಾವಕಾಶ ಕೇಳಿದ್ದರು. ಕೋವಿಡ್ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಇಂದು ಅಧಿಕಾರಿಗಳು ಮತ್ತೆ ಕಾರ್ಯಾಚರಣೆ ನಡೆಸಿದ್ದಾರೆ.

ಅಧಿಕಾರಿಗಳು ಮಾತನಾಡಿ ಗುಡಿಸಲಿನಲ್ಲಿ ವಾಸಿಸುವರಿಗೆ ಈಗಾಗಲೇ ಮನೆಗಳನ್ನು ನೀಡಲಾಗಿದೆ. ಮೂರು ತಿಂಗಳ ಹಿಂದೆ ಎಲ್ಲಾ ತೆರವು ಮಾಡಲಾಗಿತ್ತು. ಅವರು ಸಾಮಾನು ಸಾಗಿಸಲು ಸಮಯ ಕೇಳಿದ್ದರು. ಕೊರೋನಾ ಹಿನ್ನೆಲೆಯಲ್ಲಿ ಮತ್ತೆ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಈಗ ಅವಧಿ ಮುಗಿದಿದ್ದು, ಮತ್ತೆ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಸಂಸದರು ಶಾಸಕರು 252 ಮನೆಯನ್ನು ಲಾಟರಿ ಮೂಲಕ ನೀಡಲಾಗಿತ್ತು.   ಮನೆ ತೆರವುಗೊಳಿಸಿ 252 ಮನೆ ಕೆಸರೆಯಲ್ಲಿ ನೀಡಿದ್ದೇವೆ. ಪ್ರತಿಯೊಬ್ಬರಿಗೂ ಮನೆಯನ್ನು ನೀಡಿಯೇ ತೆರವುಗೊಳಿಸುತ್ತಿದ್ದೇವೆ ಎಂದು  ಹೇಳಿದರು. 30ರಿಂದ 40ಗುಡಿಸಲು ಗಳನ್ನು ತೆರವುಗೊಳಿಸುತ್ತಿದ್ದೇವೆ ಎಂದು ತಿಳಿಸಿದರು.   (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: