ಕರ್ನಾಟಕಪ್ರಮುಖ ಸುದ್ದಿ

ದಾವಣಗೆರೆ ಜಿಲ್ಲೆಯಲ್ಲಿ 43.7 ಮಿ.ಮೀ ಮಳೆ : 40.462 ಲಕ್ಷ ರೂ. ಅಂದಾಜು ನಷ್ಟ

ರಾಜ್ಯ(ದಾವಣಗೆರೆ)ಜು.20:- ಜಿಲ್ಲೆಯಲ್ಲಿ ಜು.18 ರಂದು ಸರಾಸರಿ 43.7 ಮಿ.ಮೀ ಮಳೆಯಾಗಿದ್ದು, ಒಟ್ಟಾರೆ ರೂ. 40.462 ಲಕ್ಷ ಅಂದಾಜು ನಷ್ಟ ಸಂಭವಿಸಿದೆ.
ಚನ್ನಗಿರಿ ತಾಲ್ಲೂಕಿನಲ್ಲಿ 31.9ಮಿ.ಮೀ ವಾಸ್ತವ ಮಳೆಯಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ 73.0, ಹರಿಹರ 28. ಹೊನ್ನಾಳಿ 32.9, ಜಗಳೂರು 49.7, ನ್ಯಾಮತಿ 26.5 ಮಿ.ಮೀ ಸರಾಸರಿ ಮಳೆಯಾಗಿದೆ.
ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ 31 ಕಚ್ಚಾ ಮನೆಗಳು ಭಾಗಶಃ ಹಾನಿಯಾಗಿದ್ದು ರೂ. 1.612 ಲಕ್ಷ 2-20 ಎಕರೆ ಹತ್ತಿ ಬೆಳೆ ಹಾಗೂ 23 ಎಕರೆ ಮಕ್ಕೆಜೋಳದ ಬೆಳೆ ಹಾನಿಯಾಗಿದ್ದು ರೂ. 8 ಲಕ್ಷ ಒಟ್ಟು 9.612 ಲಕ್ಷ ಅಂದಾಜು ನಷ್ಟ ಸಂಭವಿಸಿದೆ.
ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ ಒಂದು ಪಕ್ಕಾ ಮನೆ ಭಾಗಶಃ ಮನೆ ಹಾನಿಯಾಗಿದ್ದು ರೂ. 0.50 ಲಕ್ಷ, 5 ಕಚ್ಚಾ ಮನೆ ಭಾಗಶಃ ಹಾನಿಯಾಗಿದ್ದು ರೂ. 1.30 ಲಕ್ಷ ಒಟ್ಟು 1.80 ಲಕ್ಷ ಅಂದಾಜು ನಷ್ಟ ಸಂಭವಿಸಿದೆ.
ಹೊನ್ನಾಳಿ ತಾಲ್ಲೂಕು ವ್ಯಾಪ್ತಿಯಲ್ಲಿ 3 ಪಕ್ಕಾ ಮನೆ ಪೂರ್ಣ ಹಾನಿಯಾಗಿದ್ದು ರೂ. 9 ಲಕ್ಷ ಮತ್ತು 7 ಪಕ್ಕಾ ಮನೆ ಭಾಗಶಃ ಹಾನಿಯಾಗಿದ್ದು ರೂ. 3.30 ಲಕ್ಷ ಒಟ್ಟು ರೂ. 12.30 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ. ನ್ಯಾಮತಿ ತಾಲ್ಲೂಕು ವ್ಯಾಪ್ತಿಯಲ್ಲಿ 1 ಪಕ್ಕಾಮನೆ ಭಾಗಶಃ ಹಾನಿಯಾಗಿದ್ದು, 0.20 ಲಕ್ಷ ಮತ್ತು ಒಂದು ದನದ ಕೊಟ್ಟಿಗೆ ಹಾನಿಯಾಗಿದ್ದು, ರೂ. 0.10 ಲಕ್ಷ ಒಟ್ಟು ರೂ. 0.30 ಲಕ್ಷ ಅಂದಾಜು ನಷ್ಟ ಸಂಭವಿಸಿದೆ.
ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ 21 ಪಕ್ಕಾಮನೆ ಭಾಗಶಃ ಹಾನಿಯಾಗಿದ್ದು ರೂ. 9.25 ಲಕ್ಷ ಮತ್ತು 2 ಕಚ್ಚಾ ಮನೆ ಭಾಗಶಃ ಹಾನಿಯಾಗಿದ್ದು ರೂ. 0.50 ಲಕ್ಷ ಒಟ್ಟು ರೂ. 9.75 ಲಕ್ಷ ಅಂದಾಜು ನಷ್ಟ ಸಂಭವಿಸಿದೆ.
ಜಗಳೂರು ತಾಲ್ಲೂಕು ವ್ಯಾಪ್ತಿಯಲ್ಲಿ 1 ಕಚ್ಚಾ ಮನೆ ಪೂರ್ಣ ಹಾನಿಯಾಗಿದ್ದು 3.20 ಲಕ್ಷ ಮತ್ತು 3 ಕಚ್ಚಾ ಮನೆಗಳು ಭಾಗಶಃ ಹಾನಿಯಾಗಿದ್ದು, 3.50 ಲಕ್ಷ ಒಟ್ಟು ರೂ. 6.70 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ.
ಜಿಲ್ಲೆಯಲ್ಲಿ ಒಟ್ಟಾರೆ 40.462 ಲಕ್ಷ ಅಂದಾಜು ನಷ್ಟ ಸಂಭವಿಸಿದ್ದು ಸರ್ಕಾರದ ಮಾರ್ಗಸೂಚಿ ಅನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: