ಮೈಸೂರು

ಪಾದಚಾರಿ ಮಾರ್ಗ ಅಡೆತೆಡೆ ತೆರವು : ನಗರ ಸಂಚಾರ ಪೊಲೀಸ್‍ ರಿಂದ ವಿಶೇಷ ಕಾರ್ಯಾಚರಣೆ

ಮೈಸೂರು,ಜು.19:- ನಗರದ ಪ್ರಮುಖ ರಸ್ತೆಗಳಲ್ಲಿ ವ್ಯಾಪಾರಸ್ಥರು ಪಾದಚಾರಿ ಮಾರ್ಗದಲ್ಲಿ ತಮ್ಮ ವ್ಯಾಪಾರದ ಸಾಮಗ್ರಿಗಳನ್ನು ಇಟ್ಟು ವ್ಯಾಪಾರ ಮಾಡುತ್ತಿದ್ದು, ಇದರಿಂದ ಪಾದಚಾರಿಗಳ ಓಡಾಟಕ್ಕೆ ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಮೈಸೂರು ನಗರ ಸಂಚಾರ ಪೊಲೀಸರು ಪಾದಚಾರಿ ಮಾರ್ಗಗಳನ್ನು ತೆರವುಗೊಳಿಸುವ ವಿಶೇಷ ಕಾರ್ಯಾಚರಣೆಯನ್ನು ಆರಂಭಿಸಿರುತ್ತಾರೆ.
19.07.2021 ರಂದು ಸಂಚಾರ ಪೊಲೀಸರು ದೇವರಾಜ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ರವೇ ಬೀದಿ ಮತ್ತು ಗಾಂಧಿ ವೃತ್ತ.ಕೆ.ಆರ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಚಾಮರಾಜ ಜೋಡಿ ರಸ್ತೆ. ನರಸಿಂಹರಾಜ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಅಕ್ಬರ್ ರಸ್ತೆ, ಅಶೋಕ ರಸ್ತೆ ಮತ್ತು ನ್ಯೂ ಸಯ್ಯಾಜಿರಾವ್ ರಸ್ತೆ. ಸಿದ್ದಾರ್ಥನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮಲೆ ಮಹದೇಶ್ವರ ರಸ್ತೆ. ವಿ.ವಿ ಪುರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಬ್ಬಾಳ್ ಮುಖ್ಯ ರಸ್ತೆ ಮತ್ತು ವಾಲ್ಮಿಕಿ ರಸ್ತೆ ಈ ರಸ್ತೆಗಳಲ್ಲಿ ಫುಟ್‍ ಪಾತ್  ತೆರವು ಕಾರ್ಯಾಚರಣೆ ನಡೆಸಿರುತ್ತಾರೆ.
ಫುಟ್‍ಪಾತ್ ತೆರವು ಕಾರ್ಯದ ಸಮಯದಲ್ಲಿ ಫುಟ್‍ಪಾತ್ ಆವರಿಸಿಕೊಂಡಿದ್ದ ವ್ಯಾಪಾರಸ್ಥರ ವಿರುದ್ದ ಕರ್ನಾಟಕ ಪೊಲೀಸ್ ಕಾಯ್ದೆಯ ಅಡಿಯಲ್ಲಿ 15 ಪ್ರಕರಣಗಳನ್ನು ದಾಖಲಿಸಿ, ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದು, 15 ಐಎಂವಿ ಪ್ರಕರಣಗಳನ್ನು ದಾಖಲಿಸಿ, 5100 ರೂ ಸ್ಥಳ ದಂಡ ಸಂಗ್ರಹ ಮಾಡಿದ್ದು, 58 ಜನರಿಗೆ ನೋಟೀಸ್‍ಗಳನ್ನು ನೀಡಲಾಗಿದೆ.
ಫುಟ್‍ ಪಾತ್ ತೆರವುಗೊಳಿಸುವ ಈ ಕಾರ್ಯಾಚರಣೆಯನ್ನು ನಗರದ ಸಂಚಾರ ವಿಭಾಗದ
ಡಿ.ಸಿ.ಪಿ. ರವರಾದ ಗೀತಪ್ರಸನ್ನ ಹಾಗೂ ಸಂಚಾರ ವಿಭಾಗದ ಎ.ಸಿ.ಪಿ
ಎಸ್.ಇ.ಗಂಗಾಧರಸ್ವಾಮಿ ಅವರ ಮಾರ್ಗದರ್ಶನದಲ್ಲಿ ಸಂಚಾರ ವಿಭಾಗದ ಎಲ್ಲಾ ಪೊಲೀಸ್ ಠಾಣೆಗಳ ಪೊಲೀಸ್ ನಿರೀಕ್ಷಕರುಗಳು, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಾಡಿರುತ್ತಾರೆ.
ಫುಟ್‍ಪಾತ್ ತೆರವುಗೊಳಿಸುವ ಈ ಕಾರ್ಯಾಚರಣೆಯು ಇದೇ ರೀತಿ ಮುಂದಿನ ದಿನಗಳಲ್ಲಿಯೂ ಮುಂದುವರೆಯಲಿದ್ದು, ಫುಟ್‍ಪಾತ್ ಅತಿಕ್ರಮಣ ಮಾಡುವ ವ್ಯಾಪಾರಸ್ಥರ ವಿರುದ್ದ ಕಾನೂನಿನ ರೀತ್ಯಾ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದು ಮೈಸೂರು ನಗರದ ಪೊಲೀಸ್ಆ ಯುಕ್ತರಾದ ಡಾ. ಚಂದ್ರಗುಪ್ತ ತಿಳಿಸಿರುತ್ತಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: